ಕೆನರಾ ಬ್ಯಾಂಕ್ ಲಾಭ ಶೇ 22 ರಷ್ಟು ಕುಸಿತ

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 5.52 ಲಕ್ಷ ಕೋಟಿ ರು. ವ್ಯವಹಾರ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 5.27 ಲಕ್ಷ ಕೋಟಿ ರು. ವ್ಯವಹಾರ ನಡೆಸಿತ್ತು.
ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಆದಾಯ 9,204 ಕೋಟಿ ರು. ತಲುಪಿದೆ. ಈ ತ್ರೈಮಾಸಿಕದಲ್ಲಿ ಆದಾಯ ಶೇ 9 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,437 ಕೋಟಿ ರು ಆದಾಯ ಗಳಿಸಲಾಗಿತ್ತು.
ಸಾಲ ಮತ್ತು ಮುಂಗಡಗಳ ಮೇಲಿನ ವರಮಾನ 6,121 ಕೋಟಿ ರು. ಆಗಿದೆ. ಬ್ಯಾಂಕಿನ ಬಡ್ಡಿಯೇತರ ಆದಾಯ 608 ಕೋಟಿ ರು. ತಲುಪಿದೆ.
ಬ್ಯಾಂಕಿನ ಒಟ್ಟಾರೆ ವೆಚ್ಚ 7992 ಕೋಟಿ ರೂ. ತಲುಪಿದ್ದು, ಬಡ್ಡಿಯೇತರ ವೆಚ್ಚ 1283 ಕೋಟಿ ರು. ಆಗಿದೆ ಎಂದು ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಭಾರ್ಗವ್ ಹೇಳಿದ್ದಾರೆ.
ಬ್ಯಾಂಕಿನ ಚಾಲ್ತಿ ಮತ್ತು ಉಳಿತಾಯ ಠೇವಣಿಗಳ ಮೊತ್ತ 83,556 ಕೋಟಿ ರು. ಆಗಿದೆ. ಬ್ಯಾಂಕಿನ ಒಟ್ಟು ಠೇವಣಿ ಶೇ.25.65 ರಷ್ಟಿದೆ.
ಅದರಲ್ಲಿ ಉಳಿತಾಯ ಠೇವಣಿಗಳು ಆರ್ಥಿಕ ವರ್ಷ ಅಂತ್ಯಕ್ಕೆ 70,494 ಕೋಟಿ ರು. ಏರಿಕೆಯಾಗಲಿದ್ದು, 2013ರ ಮೊದಲಾರ್ಧದಲ್ಲಿ 19.5 ಲಕ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಉಳಿತಾಯ ಖಾತೆ ಠೇವಣಿಗಳಾಗಲಿವೆ ಎಂದು ಅರ್ಚನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡ್ಡಿ ಆದಾಯ 1975 ಕೋಟಿ ರು. ಆರ್ಥಿಕ ವರ್ಷದ ಅಂತ್ಯಕ್ಕೆ ಮುಂಗಡಗಳು 2,15,751 ಕೋಟಿ ರು. ತಲುಪಲಿದ್ದು, ಸಾಲ ಮತ್ತು ಠೇವಣಿಗಳ ಅನುಪಾತ ಶೇ.64 ರಷ್ಟಾಗಿದೆ.
ರೈತರಿಗೆ ಆದ್ಯತೆ: ಕೃಷಿ ಸಾಲದ ಮೊತ್ತ 33,267 ಕೋಟಿ ರೂ. ಆಗಿದ್ದು, ಆರ್ಥಿಕ ವರ್ಷದ ಮೊದಲಾರ್ಧ ವಾರ್ಷಿಕದಲ್ಲಿ 13,944 ಕೋಟಿ ರೂ.ಗಳನ್ನುರೈತರಿಗೆ ಸಾಲ ನೀಡಲಾಗಿದೆ.
ಕಿಸಾನ್ ಕಾರ್ಡು ಗಳಡಿಯಲ್ಲಿ 5,363 ಕೋಟಿ ರೂ. ಬಾಕಿಯಿರುವ ಸಾಲದ ಮೊತ್ತ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡ ಎಟಿಎಂಗಳಲ್ಲಿ ಉಪಯೋಗಿಸಲು ಎನ್ಪಿಸಿಐ ಚಿಹ್ನೆವುಳ್ಳ ನೂತನ ಕಿಸಾನ್ ಕಾಡ್ ಗಳನ್ನು ನೀಡಲಾಗಿದೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications