ಯುಎಸ್ ಚುನಾವಣೆ: ರೊಮ್ನಿಗಿಂತ ಒಬಾಮಾ ಮುಂದೆ

ಪ್ರಚಾರ ಕಾರ್ಯದ ನಂತರದ ಸಮೀಕ್ಷೆಯಂತೆ ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೊಮ್ನಿಗಿಂತ ಬರಾಕ್ ಒಬಾಮಾ ಮುಂದಿದ್ದಾರೆ.
ಬರಾಕ್ ಒಬಾಮಾ ಅಮೆರಿಕದ ಅದ್ಭುತ ಆಡಳಿತಗಾರ, ಆತನನ್ನು ಕಳೆದುಕೊಂಡರೆ ನಮಗೆ ಆಪತ್ತು. ಮುಂಬರುವ ಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿ ಎಂದು ಡೆಮೊಕ್ರೆಟಿಕ್ ಪಕ್ಷ ಮುಖಂಡ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಘೋಷಿಸಿದ್ದರು. [ಕ್ಲಿಂಟನ್ ಭಾಷಣ ಮುಖ್ಯಾಂಶ ಓದಿ]
270 ಮತಗಳ ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಒಬಾಮಾ ಮುಂದಿದ್ದರೂ ಸುಮಾರು 6 ರಾಜ್ಯಗಳಲ್ಲಿ ರೊಮ್ನೊ ತೀವ್ರ ಪೈಪೋಟಿ ನೀಡುತ್ತಿದ್ದು ಅಚ್ಚರಿ ಫಲಿತಾಂಶ ನೀಡುವ ವಿಶ್ವಾಸದಲ್ಲಿದ್ದಾರೆ.
ಡೆಮೊಕ್ರೆಟಿಕ್ ಪಕ್ಷ ಒಬಾಮಾ ಅವರ ಜನಪ್ರಿಯತೆ ಲಾಭದಿಂದ ಸುಮಾರು 20 ರಾಜ್ಯಗಳಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಐಯೊವಾ, ನೆವಾಡ ಹಾಗೂ ಪೆನ್ನಿಸಿಲ್ವನಿಯಾ ಕೊಲಂಬಿಯಾಗಳಲ್ಲಿ ಒಬಾಮಾ ಅವರ ಪಕ್ಷದ ಬಾವುಟ ಹಾರಾಡಲಿದೆ. 249 ಸ್ಥಾನಗಳು ಸಿಗುವ ನಿರೀಕ್ಷೆಯಿದೆ.
ರೊಮ್ನಿ ಅವರ ರಿಪಬ್ಲಿಕ್ ಪಕ್ಷ ಸುಮಾರು 24 ರಾಜ್ಯಗಳಲ್ಲಿ ಜಯಭೇರಿ ಬಾರಿಸಿದರೂ 206 ಸ್ಥಾನ ಮಾತ್ರ ಭದ್ರಪಡಿಸಿಕೊಳ್ಳಲಿದೆ. 83 ಸ್ಥಾನಗಳಿಗಾಗಿ ಹೋರಾಟ ಕುತೂಹಲ ಕೆರಳಿಸಿದೆ.
ಕೊಲರಾಡೋ, ಫ್ಲೊರಿಡಾ, ಒಹಿಯೋ, ನ್ಯೂ ಹಾಂಪ್ ಷೈರ್, ವರ್ಜಿನಿಯಾ ಹಾಗೂ ವಿಸ್ ಕಾನ್ಸಿನ್ ಗಳಲ್ಲಿ ಫಲಿತಾಂಶದ ಭವಿಷ್ಯದ ಬಗ್ಗೆ ಯಾರಿಗೂ ಊಹಿಸಲು ಸಾಧ್ಯವಾಗಿಲ್ಲ.
ಒಹಿಯೋ, ವಿಸ್ ಕಾನ್ಸಿನ್ ಗಳಲ್ಲಿ ರೊಮ್ನಿ ಜನಪ್ರಿಯತೆ ಹೆಚ್ಚಿದ್ದರೆ, ಫ್ಲೊರಿಡಾ ಹಾಗೂ ವರ್ಜಿನಿಯಾದಲ್ಲಿ ಒಬಾಮಾ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಕೊನೆ ಹಂತದಲ್ಲಿ ಒಹಿಯೋದಲ್ಲಿ ನಡೆಸುವ ಚುನಾವಣಾ ಪ್ರಚಾರ ಕಾರ್ಯ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಚುನಾವಣಾ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
"Ohio, you're probably going to decide the next president of the United States," ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರೊಮ್ನಿ ಹೇಳಿರುವುದು ಉಲ್ಲೇಖಾರ್ಹ.
ಚೀನಾದ ಕರೆನ್ಸಿ ಪಾಲಿಸಿ, ಆಟೋಮೊಬೈಲ್ ಕ್ಷೇತ್ರದ ಬೇಲ್ ಔಟ್, ಸ್ಥಳೀಯರಿಗೆ ಉದ್ಯೋಗ, ಹೊರಗುತ್ತಿಗೆ ಹೊರೆ, ಯುಎಸ್ ವಿದೇಶಾಂಗ ನೀತಿ, ವಲಸೆ ನೀತಿ ಈ ಬಾರಿ ಚುನಾವಣಾ ಪ್ರಚಾರದ ಪ್ರಮುಖ ಚರ್ಚಿತ ವಿಷಯಗಳಾಗಿತ್ತು.
ವಾಷಿಂಗ್ಟನ್ ಪೋಸ್ಟ್/ ಎಬಿಸಿ ನ್ಯೂಸ್ ಸಮೀಕ್ಷೆಯಲ್ಲಿ ಒಬಾಮಾ ಹಾಗೂ ರೊಮ್ನಿ ಇಬ್ಬರಿಗೂ ತಲಾ ಶೇ 48 ರಷ್ಟು ಬೆಂಬಲ ವ್ಯಕ್ತವಾಗಿತ್ತು. 538 ಸ್ಥಾನಗಳ ಪೈಕಿ 270 ಸ್ಥಾನ ಪಡೆದು ಶ್ವೇತಭವನ ಪ್ರವೇಶಿಸಲು ಒಬಾಮಾ ಅಥವಾ ರೊಮ್ನಿ ತುದಿಗಾಲಲ್ಲಿ ನಿಂತಿದ್ದಾರೆ. ಮಂಗಳವಾರ ನಡೆಯಲಿರುವ ಚುನಾವಣೆ ಎಲ್ಲಕ್ಕೂ ಉತ್ತರ ನೀಡಲಿದೆ.












Click it and Unblock the Notifications