ಕಡ್ಡಿಪೆಟ್ಟಿಗೆ ಗೋದಾಮಿಗೆ ಬೆಂಕಿ, ಲಕ್ಷಾಂತರ ನಷ್ಟ

ಶರಣ ನಗರದ ಗೋದಾಮಿನಲ್ಲಿ ಬೆಳಿಗ್ಗೆ 5 ಅಥವಾ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ಸ್ಥಳೀಯರು ನೀಡಿದ ಮಾಹಿತಿಯಿಂದ ಕೂಡಲೇ 15 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ತ್ವರಿತಗತಿಯಲ್ಲಿ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೋದಾಮಿನಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಯಿತು. ಕೆಲವರು ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನುತ್ತಾರೆ. ಆದರೆ ಖಚಿತ ಕಾರಣ ಗೊತ್ತಾಗಿಲ್ಲ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಗುರುರಾಜ್ ತಿಳಿಸಿದ್ದಾರೆ.
ಕಡ್ಡಿ ಪೆಟ್ಟಿಗೆ, ಬಿಸ್ಕತ್, ಸೊಳ್ಳೆ ಬತ್ತಿ, ಅಗರಬತ್ತಿ ಇತರೆ ಸೇರಿದಂತೆ 5 ರಿಂದ 6 ಲಕ್ಷ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಮಾಲೀಕ ದೀಪಕ್ ಜಂವಾರ್ ಅವರು ಹೇಳಿದ್ದಾರೆ. ಆದರೆ ನಷ್ಟದ ಪ್ರಮಾಣ ಖಚಿತಗೊಂಡಿಲ್ಲ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications