ಮದುವೆ ಮನೆಯಲ್ಲಿ ಭಾರೀ ಅಗ್ನಿದುರಂತ, 28 ಸಾವು

ಸಾವಿಗೀಡಾದವರಲ್ಲಿ ಹೆಂಗಸರು ಮತ್ತು ಮಕ್ಕಳೇ ಹೆಚ್ಚು. ಮಂಗಳವಾರ ಮದುವೆಯ ಸಂತಸ ಮುಗಿಲುಮುಟ್ಟಿದ ಸಂದರ್ಭದಲ್ಲಿ ವಿದ್ಯುತ್ ಕೇಬಲ್ ಕಟ್ಟಾಗಿ ಈ ದುರಂತ ಸಂಭವಿಸಿದೆ. ಮದುವೆ ನಡೆಯುತ್ತಿದ್ದ ಕಟ್ಟಡದ ಒಂದೇ ಬಾಗಿಲಿನಿಂದ ಎಲ್ಲರೂ ಹೊರಹೋಗಲು ಯತ್ನಿಸಿದಾಗ ಈ ದುರಂತ ಘಟಿಸಿದೆ. ಅದೇ ಸ್ಥಳದಲ್ಲಿ ವಿದ್ಯುತ್ ಕೇಬಲ್ ಬಿದ್ದಿದ್ದರಿಂದ ಅದನ್ನು ಸ್ಪರ್ಶಿಸಿ ಹೆಚ್ಚಿನವರು ಸತ್ತಿದ್ದಾರೆ.
ಸಂತೋಷಕೂಟದಲ್ಲಿ ಭಾಗಿಯಾಗಿದ್ದ ಕೆಲವರು ಸಂಸತದಲ್ಲಿ ಗುಂಡು ಹಾರಿಸಿದ್ದರಿಂದ ಹೈ ವೋಲ್ಟೇಜ್ ವಿದ್ಯುತ್ ತಂತಿ ಕಟ್ಟಾಗಿ ಕಟ್ಟಡದ ಮೇಲಿ ಬಿದ್ದಿದೆ. ಆಗ ತೀವ್ರ ಗಲಿಬಿಲಿಯುಂಟಾಗಿ ನೂಕುನುಗ್ಗಲು ಸಂಭವಿಸಿದೆ. ಬಾಗಿಲು ಕೂಡ ಕಬ್ಬಿಣದಾಗಿದ್ದು, ಹೊರಹೋಗುತ್ತಿರುವವರು ಅದನ್ನು ಸ್ಪರ್ಶಿಸಿದ್ದರಿಂದ ಹೆಚ್ಚಿನ ಅವಘಡ ಸಂಭವಿಸಿದೆ ಎಂದು ಅರೇಬಿಕ್ ದಿನಪತ್ರಿಕೆ ಅಲ್ ರಿಯಾದ್ ವರದಿ ಮಾಡಿದೆ.
2009ರಲ್ಲಿ ಕುವೈತ್‌ನಲ್ಲಿ ಇದಕ್ಕಿಂತ ದೊಡ್ಡ ದುರಂತ ಸಂಭವಿಸಿತ್ತು. ಆಗ ಮದುವೆ ಮನೆಯಲ್ಲಿ ಉಂಟಾಗಿದ್ದ ಅಗ್ನಿ ಅನಾಹುತದಲ್ಲಿ 57 ಹೆಂಗಸರು ಮತ್ತು ಮಕ್ಕಳು ಸುಟ್ಟು ಭಸ್ಮವಾಗಿದ್ದರು. 23 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನ ಎರಡನೇ ಮದುವೆಯನ್ನು ತಪ್ಪಿಸುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಳು. ಸೌದಿ ಅರೇಬಿಯಾದಲ್ಲಿ ಸಾವಿಗೀಡಾದವರ ಗುರುತು ಇನ್ನೂ ಸಿಕ್ಕಿಲ್ಲ.












Click it and Unblock the Notifications