ದಕ್ಷ ಪೊಲೀಸ್ ದಯಾನಾಯಕ್ ಈಗೇನು ಮಾಡುತ್ತಿದ್ದಾರೆ?

ಇಲಾಖೆಗೆ ಮರಳುತ್ತಿದ್ದಂತೆ ಸ್ಥಳೀಯ ಸಶಸ್ತ್ರ ವಿಭಾಗದಲ್ಲಿ (Local Arms Division) ಸೇವೆಯಲ್ಲಿ ಸಕ್ರಿಯರಾಗಿದ್ದ ದಯಾನಾಯಕ್ ಅವರಿಗೆ ಈಗ ಅವರಿಗೊಪ್ಪುವ ಕೆಲಸ ನೀಡಲಾಗಿದೆ. ಅಂದರೆ ಅವರು ವೊರ್ಲಿಯ ಬಾಂದ್ರಾ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
ಮುಂಬೈ ಭದ್ರತೆಗೆ ಸಂಬಂಧಿಸಿದಂತೆ ವೊರ್ಲಿಯ ಬಾಂದ್ರಾ ಪಶ್ಚಿಮ ವಿಭಾಗವು ಆಯಕಟ್ಟಿನ ಪ್ರದೇಶವಾಗಿದೆ. ದಯಾನಾಯಕ್ ಅವರಿಗೆ promotion ಸಿಕ್ಕಿಲ್ಲವಾದರೂ ಹೆಚ್ಚುವರಿ ಪೊಲಿಸ್ ಆಯುಕ್ತ ವಿಶ್ವಾಸ್ ನಂಗ್ರೆ ಪಾಟೀಲ್ ಸಾರಥ್ಯದ ವಿಶೇಷ ಘಟಕದಲ್ಲಿ ಕಾರ್ಯ ನಿರ್ವಹಿಸುವ ಅವಕಾಶವೊದಗಿಸಲಾಗಿದೆ.
ದಯಾನಾಯಕ್, 1995ನೇ ಬ್ಯಾಚಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ, ಸುಮಾರು 80 ಪಾತಕಿಗಳನ್ನು ಎನ್ ಕೌಂಟರ್ ಆಯುಧದಿಂದ ಪರಲೋಕಕ್ಕೆ ಕಳಿಸಿದ ಖ್ಯಾತಿಯಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊರಿಸಿ ದಯಾನಾಯಕ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
2004ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಗೊಂಡಿದ್ದ ಮೂಲತಃ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ದಯಾನಾಯಕ್ ಬಾಂದ್ರಾದಲ್ಲಿನ ಡಿಸಿಪಿ ಕಚೇರಿಗೆ ಈ ವಾರ ಸ್ಥಳಾಂತರಗೊಂಡು ಮತ್ತೆ ಸಕ್ರಿವಾಗಿರಲು ಸನ್ನದ್ಧರಾಗಿದ್ದಾರೆ. ಇದು ನನ್ನ ನಿಸ್ವಾರ್ಥ ಸೇವೆಯ ದಕ್ಷ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ದಯಾ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
'ಇದು ನನ್ನ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಫಲ ಅಂದುಕೊಂಡಿದ್ದೇನೆ. ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲೇ ಮತ್ತೆ ಸೇವೆಯಲ್ಲಿ ಸಕ್ರಿಯನಾಗಿ ಕರ್ತವ್ಯ ನಿಷ್ಠೆಯನ್ನು ಮೆರೆಯುತ್ತೇನೆ. ಸಮಾಜ ವಿರೋಧಿಗಳಿಗೆ ಮತ್ತೆ ನಿಜ ಅರ್ಥದ ಸಿಂಹಸ್ವಪ್ನರಾಗಿ ತನ್ನ ವರ್ಚಸ್ಸಿನ ಮೂಲಕ ಪೊಲೀಸ್ ಇಲಾಖೆಗೆ ವಿಶ್ವಾಸಾರ್ಹತೆಯನ್ನು ತುಂಬುವಲ್ಲಿ ಪ್ರಯತ್ನಿಸುತ್ತೇನೆ' ಎಂದು ದಯಾನಾಯಕ್ ಪ್ರತಿಕ್ರಿಯಿಸಿದ್ದಾರೆ. ಆಲ್ ದಿ ಬೆಸ್ಟ್ ದಯಾ ನಾಯಕ್.












Click it and Unblock the Notifications