ಇನ್ಫೋಸಿಸ್ Q2 ನಿರೀಕ್ಷೆ ತಕ್ಕ ಫಲವಿಲ್ಲ

2012-13ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ ಶೇ 3.4ರಂತೆ 2,369 ಕೋಟಿ ರು.ನಷ್ಟು ನಿವ್ವಳ ಲಾಭ ಬಂದಿದೆ. ಸಂಸ್ಥೆಯ ಆದಾಯ ಶೇ 2.5ರಷ್ಟು ಏರಿಕೆ ಕಂಡು 9,858 ಕೋಟಿ ರು ಗಳಿಸಿದೆ.
ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಲಾಭ ಶೇ 24.29 ರಷ್ಟು ಏರಿಕೆ ಕಂಡಿದ್ದರೆ, ಆದಾಯ ಶೇ 21.7 ರಷ್ಟು ಏರಿದೆ.
ಕಾರ್ಯನಿರ್ವಹಣಾ ವೆಚ್ಚ ಶೇ 3.6ರಂತೆ 2,597 ಕೋಟಿ ರು.ಗಳಿಗೆ ಇಳಿಕೆಯಾಗಿದೆ. ಉತ್ತರ ಅಮೆರಿಕದ ಮಾರುಕಟ್ಟೆಯಲ್ಲಿ ಆದಾಯ ಕೊಂಚ ಕುಸಿದಿದೆ. ಶೇ 64.1 ರಷ್ಟಿದ್ದ ಆದಾಯ ಶೇ 63.9ಕ್ಕೆ ಇಳಿದಿದೆ.
Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿದೆ.
ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯಲ್ಲಿನ ಏರುಪೇರು ಭಾರತದ ಐಟಿ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಇನ್ಫೋಸಿಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.
'ನಾವು ನಮ್ಮ ಸಂಸ್ಥೆ ಉದ್ಯೋಗಿಗಳ ಸಂಬಳ ಏರಿಕೆ ಮಾಡಿದ್ದೇವೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ತೊಡಗಿಸಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ' ಎಂದು ಶಿಬುಲಾಲ್ ಹೇಳಿದರು.
ಪ್ರತಿ ಈಕ್ವಿಟಿ ಷೇರಿನ ಮೇಲೆ 15 ರು ಗಳ ಮಧ್ಯಂತರ ಡಿವಿಡೆಂಡ್ ಅನ್ನುಇನ್ಫೋಸಿಸ್ ಬೋರ್ಡ್ ಘೋಷಿಸಿದೆ.
Q2 ತ್ರೈಮಾಸಿಕ ವರದಿ ನಿರಾಶೆ ಮೂಡಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ 2,349.5 ರು ನಂತೆ ಶೇ 7.19 ರಷ್ಟು ಕುಸಿತ ಕಂಡಿದೆ. [ಹೆಚ್ಚಿನ ವಿವರಗಳನ್ನು ಗುಡ್ ರಿಟರ್ನ್ಸ್. ಇನ್ ನಲ್ಲಿ ನೋಡಿ]












Click it and Unblock the Notifications