Get Updates
Get notified of breaking news, exclusive insights, and must-see stories!

ಬೆಳಗಾವಿ ಸುವರ್ಣ ವಿಧಾನ ಸೌಧ ಉದ್ಘಾಟನೆ ಸಜ್ಜು

ಬೆಳಗಾವಿ, ಅ.9: ಇಲ್ಲಿನ ಹಲಗಾ ಬಳಿ ನೂತನವಾಗಿ ನಿರ್ಮಿಸಲಾಗಿರುವ ಸುವರ್ಣಸೌಧ ಕಟ್ಟಡದ ಉದ್ಘಾಟನಾ ಸಮಾರಂಭ ಅಕ್ಟೋಬರ್ 11 ಗುರುವಾರ ಮಧ್ಯಾಹ್ನ 12-30 ಗಂಟೆಗೆ ನಡೆಯಲಿದೆ. ರಾಷ್ಟ್ರಪತಿಯ ಪ್ರಣಬ್ ಮುಖರ್ಜಿ ಅವರು ಸುವರ್ಣ ವಿಧಾನ ಸೌಧವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿಯವರು ಗುರುವಾರ(ಅ.11) ಮಧ್ಯಾಹ್ನ 01-55 ಗಂಟೆಗೆ ನೂತನ ಸುವರ್ಣ ಸೌಧದ ವಿಧಾನ ಸಭೆ ಸಭಾಂಗಣದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ವಿಧಾನ ಸಭೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Suvarna Vidhanasoudha, image source: http://belgaumbuzz.com

ಕಂಬಾರ ಅವರಿಗೆ ಜ್ಞಾನಪೀಠ: ಕನ್ನಡದ ಹಿರಿಯ ಸಾಹಿತಿ ಡಾ: ಚಂದ್ರಶೇಖರ ಕಂಬಾರ ಅವರಿಗೆ ದೇಶದ ಅತ್ಯುನ್ನುತ ಸಾಹಿತ್ಯದ ಗೌರವವಾದ, 2010 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಅಕ್ಟೋಬರ್ 11 ರಂದು ಸಂಜೆ 5-30 ಕ್ಕೆ ಬೆಳಗಾವಿಯ ಗಾಂಧಿ ಭವನ ಸಭಾಂಗಣದಲ್ಲಿ ನೀಡಲಾಗುತ್ತದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮುಖ್ಯ ಅತಿಥಿಗಳಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡು ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಇಂಧನ ಕಾರ್ಪೋರೇಟ್ ವ್ಯವಹಾರಗಳ ಸಚಿವ ಡಾ. ಎಂ. ವೀರಪ್ಪ ಮೊಯಿಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ.

ಈ ಕಾರ್ಯಕ್ರಮದ ಭಾಗವಾಗಿ ಡಾ: ಚಂದ್ರಶೇಖರ್ ಕಂಬಾರ ಅವರ ಕುರಿತು ವಾರ್ತಾ ಇಲಾಖೆ ನಿರ್ಮಿಸಿರುವ 28 ನಿಮಿಷಗಳ ಸಾಕ್ಷ್ಯಚಿತ್ರವನ್ನು ಅಕ್ಟೋಬರ್ 10 ರಂದು ರಾತ್ರಿ 9-30 ಗಂಟೆಯಿಂದ 10-00 ಗಂಟೆಯವರೆಗೆ ಬೆಂಗಳೂರು ದೂರದರ್ಶನ ಕೇಂದ್ರದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸುಮಾರು 391.00 ಕೋಟಿ ವೆಚ್ಚದ ಸುವರ್ಣ ಸೌಧ ನಿರ್ಮಾಣ ಕಾಮಗಾರಿಯನ್ನು ಮೆ: ಬಿ.ಜಿ.ಶಿರ್ಕೆ ಕನ್ಸ್ಟ್ರಕ್ಸನ್ ಟೆಕ್ನಾಲಜಿ ಪ್ರೈ.ಲಿ. ಪುಣೆ ಸಂಸ್ಥೆ ಅಚ್ಚುಕಟ್ಟಾಗಿ ಪೂರೈಸಿದೆ.

ಈ ಸುವರ್ಣ ಸೌಧದಲ್ಲಿ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಹಾಗೂ ಉಪಸಭಾಪತಿಗಳ ಕೊಠಡಿಗಳು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯಗಳು, ಮುಖ್ಯಮಂತ್ರಿಗಳ ಕೊಠಡಿ ಹಾಗೂ ಕಚೇರಿ, ಸಚಿವರುಗಳಿಗಾಗಿ 38 ಕೊಠಡಿಗಳು ಕ್ಯಾಬಿನೇಟ್ ಹಾಲ್, ಮೀಟಿಂಗ್ ಹಾಲ್ ಹಾಗೂ ಆಡಳಿತ ಕಚೇರಿಗಳನ್ನು ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+