ವಾರಾಂತ್ಯದಲ್ಲಿ ಕೈಲಾಸಂ ನಗೆ ನಾಟಕ ನೋಡಿ

ವಟೀಕುಟೀರ ಪ್ರಸ್ತುತ ಪಡಿಸಿ ಅಂತರಂಗ ತಂಡ ಪ್ರದರ್ಶಿಸುವ ನಾಟಕ ಟಿ. ಪಿ. ಕೈಲಾಸಂ ರವರ ಹೋಂರೂಲು ದಿನಾಂಕ 15.09.2012 (ಶನಿವಾರ)ದಂದು ಸಂಜೆ 7.30ಕ್ಕೆ ಕೆ. ಹೆಚ್. ಕಲಾಸೌಧ, ರಾಮಾಂಜುನೇಯ ಗುಡ್ಡದ ಹಿಂಭಾಗ, ಹನುಮಂತನಗರದಲ್ಲಿ ಪ್ರದರ್ಶಿಸವಾಗಲಿದೆ.
ಕೈಲಾಸಂ ಕನ್ನಡ ನಾಟಕ ಜಗತ್ತಿನ ಪ್ರಹಸನ ಪ್ರಪಿತಾಮಹ. ಅವರದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರಾಸಬದ್ಧ ಸಂಭಾಷಣೆ, ಕಂಗ್ಲೀಷ್, ಅವರ ನಾಟಕಗಳ ಹೈಲೈಟ್.
'ಹೋಂರೂಲ್ ನಾಟಕದ ವಸ್ತು ಹೀಗಿದೆ. ಮೈದಾನದಲ್ಲಿ ಹೆಬ್ಬುಲಿ ಮನೇಲಿ ಮೂಗಿಲಿ ಈ ನಾಟಕದ ಪಾತ್ರಧಾರಿ ರಾಮಣ್ಣ. ಮನೆಯ ಯಜಮಾನಿಕೆ ತನ್ನ ಹಿಡಿತದಲ್ಲಿಟ್ಟುಕೊಳ್ಳು ಪ್ರಯತ್ನಿಸುವ ಹೆಂಡತಿ ತಾಯಿ ಮಧ್ಯೆ ನರಳುವ ಅಸಹಾಯಕ ಪ್ರಾಣಿಯೆ ಈ ರಾಮಣ್ಣ.
ಕೈಲಾಸಂ ಎಂದರೆ ನಗೆಯಬುಗ್ಗೆ, ಮಾತುಗಳ ಆಗರ. ವಿಡಂಬನೆಗೂಡು, ಇವು ಅವರ ಕೃತಿಗಳಲ್ಲಿ ಎದ್ದುಕಾಣುವ, ಓದುಗ ನಿರೀಕ್ಷಿಸುವ ಅಂಶಗಳು.
ಅವರ ಕೃತಿಗಳನ್ನು ರಂಗಕ್ಕೆ ತರುವಾಗ ಅವರ ಬರವಣಿಗೆಯ ಓಘ, ನಗೆ ಝಲಕ್‌ನ್ನು ಹಾಗೆ ರಂಗಕ್ಕೆ ತರುವ ಸರ್ಕಸ್ಸನ್ನು ಮಾಡಬೇಕಾಗುತ್ತದೆ.ಕೈಲಾಸಂರ ಎಲ್ಲಾ ಹಾಸ್ಯ, ವಿಡಂಬನೆ ಈ ನಾಟಕದಲ್ಲಿ ಅಡಗಿದೆ.
ಮೂಲ ನಿರ್ದೇಶನ : ಎಸ್. ಕೆ. ಮಾಧೂರಾವ್.
ಈಗ ನಿರ್ದೇಶನ: ವೈ. ವಿ. ಗುಂಡೂರಾವ್.
ತಂಡ : ಅಂತರಂಗ
ಟಿಕೆಟ್‌ಗಳಿಗಾಗಿ ಸಂಪರ್ಕಿಸಿ : 98806 95659
ಆನ್ ಲೈನ್ ಬುಕ್ಕಿಂಗ್: http://www.indianstage.in/EventDetails.do?eventId=3371












Click it and Unblock the Notifications