ನೀರಿಲ್ಲ:ಬಾಸ್ಮತಿ, ಸೋನಾ ಮಸೂರಿ ಅಕ್ಕಿಗೆ ಸಂಚಕಾರ

Shortage of Basmati rice due to draught in North Karnataka
ಬೆಂಗಳೂರು, ಸೆ 6: ತುಂಗಾನದಿ ತೀರ ರಾಯಚೂರು, ಗಂಗಾವತಿ, ಕಾರಟಗಿ ಪ್ರದೇಶ 'ಭತ್ತದ ಕಣಜ' ಎಂದೇ ಪ್ರಸಿದ್ಧ. ಆದರೆ ಈ ಭಾಗದಲ್ಲಿ ಬರದಿಂದ ತತ್ತರಿಸಿ ಹೋಗಿರುವ ರೈತಾಪಿ ವರ್ಗ ತಮ್ಮ ಜೀವನಕ್ಕೆ ಸಂಜೀವಿನಿಯಾಗಿರುವ ಭತ್ತ ಬೆಳೆಯಲಾಗದೆ ಕಂಗಾಲಾಗಿದ್ದಾರೆ.

ಬಡ ರೈತ ಕುಟುಂಬಕ್ಕೆ ಆಹಾರವಲ್ಲದಿದ್ದರೂ ಬಾಸ್ಮತಿ ಅಕ್ಕಿ ಇಲ್ಲಿನ ರೈತರ ಪಾಲಿಗೆ ವಾಣಿಜ್ಯ ಬೆಳೆ.

ಉತ್ತರ ಕರ್ನಾಟಕದ ಹೊಲಗದ್ದೆಯಲಿ ಬಾಸ್ಮತಿಯ ಪರಿಮಳ ಘಮಘಮಿಸುತ್ತಿತ್ತು. ಆದರೆ ಬರದ ಭೀಕರತೆಯಿಂದಾಗಿ ಹೊಲಗದ್ದೆಗಳು ಒಣಒಣ, ಭಣಭಣವಾಗಿದೆ.

ಬೆಳೆ ಹಾನಿಯಿಂದ ರೈತರ ಜೊತೆಗೆ ಇಡೀ ಕರ್ನಾಟಕ ರಾಜ್ಯ ಸಂಕಷ್ಟಕ್ಕೆ ಸಿಲುಕಲಿದೆ. ಕೈಕೊಟ್ಟ ಮುಂಗಾರಿನಿಂದ ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಎಲ್ಲೋ ಅಲ್ಪಸ್ವಲ್ಪ ಬಿತ್ತನೆಯಾದರೂ ಅದು ಕಮರಿ ಹೋಗುತ್ತಿದೆ. ಸೋನಾ ಮಸೂರಿ ಬೆಳೆಯೂ ಚಿತ್ರಾನ್ನವಾಗಿದೆ.

ಉತ್ಕೃಷ್ಟ ಮಟ್ಟದ ಇಲ್ಲಿನ ಬಾಸ್ಮತಿ ಅಕ್ಕಿಗಳು ಇತರ ರಾಜ್ಯಗಳಿಗೂ ರಫ್ತಾಗುತ್ತದೆ. ಭತ್ತ ಬೆಳೆಯುವ ಪ್ರಮಾಣ ಗಣನೀಯವಾಗಿ ಕಮ್ಮಿಯಾಗಿರುವುದರಿಂದ ಕೃಷಿ ಕಾರ್ಮಿಕರು ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ.

ಮಳೆಗಾಲ ಮುಗಿಯುವ ಮುನ್ನ ಭರ್ಜರಿ ಮಳೆಯಾದರೆ ನಷ್ಟವನ್ನು ತುಂಬಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ರೈತರು ವರುಣ ದೇವರಿಗೆ ಪ್ರಾರ್ಥಿಸುತ್ತಿದ್ದಾರೆ. ವಾಡಿಕೆಗಿಂತ ಶೇ. 60ರಷ್ಟು ಮಳೆ ಕಮ್ಮಿಯಾಗಿರುವುದರಿಂದ ನಿರೀಕ್ಷಿತ ಬಿತ್ತನೆ ಕಡಿಮೆಯಾಗಿ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಲಿದೆ.

ಮಳೆಗಾಗಿ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೂ ಕರಾವಳಿ ಮತ್ತು ಮಲೆನಾಡು ಭಾಗ ಬಿಟ್ಟರೆ ಎಲ್ಲೂ ಉತ್ತಮ ಮಳೆಯಾದ ವರದಿಯಾಗಿಲ್ಲ. ದೇವರು ಪಕ್ಷಪಾತಿ ಅನ್ನದೆ ವಿಧಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+