ರಾಯಚೂರು: ಸಿಸಿಬಿ ಪೊಲೀಸರಿಂದ ಮತ್ತೊಬ್ಬನ ಅರೆಸ್ಟ್

ರಾಯಚೂರಿನ ದೇವದುರ್ಗದಲ್ಲಿ ಶಬರಿ ಎಂಬ ಹೆಸರಿನ ಮೊಬೈಲ್ ಅಂಗಡಿ ನಡೆಸುತ್ತಿದ್ದ. ಈತ ಶಂಕಿತ ಉಗ್ರರಿಗೆ ಮೊಬೈಲ್ ಸಿಮ್ ಕಾರ್ಡುಗಳನ್ನು ಒದಗಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮಂಗಳವಾರ ರಾಯಚೂರಿನಲ್ಲಿ ಇವನನ್ನು ಬಂಧಿಸಲಾಗಿದೆ.
ಬಂಧಿತ ಉಗ್ರನೊಬ್ಬ ವಿಚಾರಣೆಯ ವೇಳೆ ಮಲ್ಲಿಕಾರ್ಜುನ ಮತ್ತು ಅವನ ಮೊಬೈಲ್ ಅಂಗಡಿಯ ಬಗ್ಗೆ ಬಾಯ್ಬಿಟ್ಟಿದ್ದ. ಆ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿ, ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣದಾಸೆಗಾಗಿ ಮಲ್ಲಿಕಾರ್ಜುನ ವಿಳಾಸ, ಮತ್ಯಾವುದೇ ದಾಖಲೆಗಳನ್ನು ಪಡೆಯದೆ ಉಗ್ರರಿಗೆ ಮೊಬೈಲ್ ಸಿಮ್ ಕಾರ್ಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಇದರೊಂದಿಗೆ ಬಂಧಿತರ ಸಂಖ್ಯೆ 19ಕ್ಕೇರಿದೆ. ಗುರುವಾರ ಹುಬ್ಬಳ್ಳಿಯಲ್ಲಿ 6 ಮಂದಿ ಬಂಧನ. ಅಂದೇ ಬೆಂಗಳೂರಿನಲ್ಲಿ 5 ಮಂದಿ ಬಂಧನ. ಶುಕ್ರವಾರ ಹೈದರಾಬಾದಿನಲ್ಲಿ ಒಬ್ಬನ ಬಂಧನ. ಶನಿವಾರ ನಾಂದೇಡಿನಲ್ಲಿ ನಾಲ್ವರ ಬಂಧನ. ಭಾನುವಾರ ಬೆಂಗಳೂರಿನಲ್ಲಿ ಮತ್ತೊಬ್ಬನ ಸೆರೆ. ಸೋಮವಾರ ನಯ್ಯೀಮ್ ಸಿದ್ದಕಿಯ ಬಂಧನ. ಇದೀಗ ಮಂಗಳವಾರ ರಾಯಚೂರಿನಲ್ಲಿ ಮಲ್ಲಿಕಾರ್ಜುನನ ಬಂಧನ.












Click it and Unblock the Notifications