ವಾಯುಸೇನೆ ಹೆಲಿಕಾಪ್ಟರ್ ಅಪಘಾತ, 9 ಸಾವು
ಜಾಮ್ ನಗರ(ಗುಜರಾತ್), ಆ.30: ಭಾರತೀಯ ವಾಯುಸೇನೆಗೆ ಸೇರಿದ ಎರಡು ತರಬೇತಿ ಹೆಲಿಕಾಪ್ಟರ್ ಗಳು ಆಗಸದಲ್ಲಿ ಡಿಕ್ಕಿ ಹೊಡೆದು ಬಹುದೊಡ್ಡ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 9 ಜನ ವಾಯುಸೇನೆ ಸಿಬ್ಬಂದಿಗಳು ಈ ದುರಂತದಲ್ಲಿ ಅಸುನೀಗಿದಾರೆ. MI-175 ಹೆಲಿಕಾಪ್ಟರ್ ಗಳು ತರಬೇತಿ ನಿರತರಾಗಿದ್ದರು.
ಈ ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಲಭ್ಯ ಮಾಹಿತಿ ಪ್ರಕಾರ ತರಬೇತಿ ಸಮಯದಲ್ಲಿ ಎರಡು ಕಾಪ್ಟರ್ ಗಳು ಅಪಾಯದ ಮುನ್ಸೂಚನೆ ಮೀರಿ ಹತ್ತಿರವಾಗಿ ಚಲಿಸುತ್ತಿದ್ದದ್ದು ದುರಂತಕ್ಕೆ ಕಾರಣವಾಗಿದೆ.

ಘಟನೆ ಬಗ್ಗೆ ತಿಳಿದ ತಕ್ಷಣ ಹಿರಿಯ IAF ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸಲಾಗಿದ್ದು, ಶವಗಳನ್ನು ಹೊರ ತೆಗೆಯಲಾಗಿದೆ. ಭಾರತೀಯ ವಾಯುಸಸೇನೆಗೆ ಸೇರಿರುವ ಎರಡು ಹೆಲಿಕಾಪ್ಟರ್ ಗಳ ಅಪಘಾತದ ನಿಖರ ಕಾರಣ ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು ಕಾಪ್ಟರ್ ಗಳಲ್ಲಿದ್ದ ಬ್ಲಾಕ್ ಬಾಕ್ಸ್ ಗಳನ್ನು ಪಡೆಯಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.












Click it and Unblock the Notifications