ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿಗೂ ಒಂದು ಕಾಲ, ಮೊಟ್ಟೆಗೂ ಒಂದು ಕಾಲ

By Mahesh
|
Google Oneindia Kannada News

Egg price scales new high
ಚೆನ್ನೈ/ಬೆಂಗಳೂರು, ಆ.30: 'ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ' ಎಂದು ಸಚಿನ್ ತೆಂಡೂಲ್ಕರ್ ಸೇರಿದಂತೆ ಹತ್ತು ಹಲವು ಖ್ಯಾತನಾಮರು ಜಾಹೀರಾತುಗಳ ಮೊಟ್ಟೆ ಪರ ನಿಂತ ಮೇಲೆ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದೆ.

ಬುಧವಾರ ಮಾರುಕಟ್ಟೆಯಲ್ಲಿ ಚೆನ್ನೈ : 3.40 ರು ಪ್ರತಿ ಮೊಟ್ಟೆ ದರ ಇದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಜೂ.28ರಂದು 3.33 ಕ್ಕೇರಿತ್ತು , ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ 3.35 ರು ಹಾಗೂ ನಾಮಕ್ಕಲ್ ಕಡೆಯ ಮೊಟ್ಟೆ 3.40 ರು ಇತ್ತು.

ನಾಮಕ್ಕಲ್ ನ National Egg Coordination Committee (NECC) 15 ಪೈಸೆ ಹೆಚ್ಚಳಕ್ಕೆ ಕಾರಣ ಹುಡುಕಲಾಗುತ್ತಿದೆ. ಆದರೆ, ಸದ್ಯದ ಟ್ರೆಂಡ್ ಗಮನಿಸಿದರೆ ಮೊಟ್ಟೆ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು NECC ಮುಖ್ಯಸ್ಥ ಪಿ ಸೆಲ್ವರಾಜ್ ಹೇಳಿದ್ದಾರೆ.

ಆದರೆ, ನಿರೀಕ್ಷೆಯಂತೆ ಇದು ಬೇಡಿಕೆ ಹೆಚ್ಚಳದಿಂದ ಉಂಟಾಗಿರುವ ಬೆಲೆ ಏರಿಕೆಯಲ್ಲ. ಕೋಳಿಗಳಿಗೆ ನೀಡುವ ಆಹಾರದ ದರ ಏರಿಕೆಯಾಗಿರುವುದು ಪರೋಕ್ಷವಾಗಿ ಮೊಟ್ಟೆಗೆ ಇಳಿದಿದೆ ಎನ್ನಲಾಗಿದೆ.

ಇದ್ದಕ್ಕಿದ್ದಂತೆ ಮೊಟ್ಟೆ ಬೆಲೆ ಏರಿಕೆಯಾಗಿರುವುದನ್ನು ಕಂಡು ಬುಧವಾರ ಮಾರುಕಟ್ಟೆಯಲ್ಲಿ ಗ್ರಾಹಕರು ಕಸಿವಿಸಿಕೊಂಡಿದ್ದಾರೆ. ಸಗಟು ಮಾರಾಟಗಾರರು ಕೂಡಾ ಗೊಣಗಾಡಿಕೊಂಡು ಖರೀದಿಸಿದ್ದಾರೆ.

ತರಕಾರಿ ಹಾಗೂ ಮಾಂಸದ ಬೆಲೆ ಪ್ರತಿದಿನ ಏರುಪೇರಾಗುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆಗೆ ಶರಣಾಗಿದ್ದ ಗ್ರಾಹಕರು ಈಗ ಸಿಡಿಮಿಡಿಗೊಂಡಿದ್ದಾರೆ. ಕಳೆದ ವಾರಕ್ಕೆ ಲೇಯರ್ ಹಾಗೂ ಬ್ರಾಯ್ಲರ್ ಮೊಟ್ಟೆಗಳ ಬೆಲೆ 1 ರು ಹೆಚ್ಚಳ ಕಂಡಿದೆ.

NECC ಲೇಯರ್ ತಳಿಗಳಿಗೆ 37 ರು ನಿಗದಿ ಪಡಿಸಿದ್ದರೆ, ಬ್ರಾಯ್ಲರ್ ತಳಿ ಬೆಲೆ 69 ಪ್ರತಿ ಕೆಜಿ ಯಂತೆ ಮಾರಾಟವಾಗುತ್ತಿದೆ. ಇದೆ ಬೆಲೆ ಬೆಂಗಳೂರು, ಮೈಸೂರಿನಲ್ಲಿ 70-71 ರು. ನಷ್ಟಿದೆ. ಏ.2011ರಲ್ಲಿ ಈ ಬೆಲೆ 75 ರು ದಾಟಿತ್ತು. ಒಟ್ಟಾರೆ, ದಿನಕ್ಕೊಂದು ಮೊಟ್ಟೆ ಕೊಳ್ಳಲು ಕಿಸೆಗೆ ಸ್ವಲ್ಪ ಹೆಚ್ಚಾಗೆ ಖರ್ಚು ಬೀಳಲಿದೆ.

'ದಿನ ಬರೀ ಮೊಟ್ಟೆ ತಿನ್ನುತ್ತಿದ್ದೆ.. ಆಮೇಲೆ ಆಮ್ಲೇಟ್ ಗೆ ನನ್ನ ರುಚಿ ಬದಲಾಯಿಸಿಬಿಟ್ಟೆ. ಆದರೆ, ಈಗ ಒಳ್ಳೆ ಆಮ್ಲೇಟ್ ಬೇಕು ಎಂದರೆ ರಸ್ತೆ ಬದಿಯಲ್ಲಿ 15 ರು ರೇಟ್ ಇದೆ ಅದೇ ಒಳ್ಳೆ ಹೋಟೆಲ್ ನಲ್ಲಿ 50 ರು ಗೂ ಅಧಿಕವಾಗುತ್ತದೆ.

ಥರಾವರಿ ಆಮ್ಲೇಟ್ ಅಲ್ಲದೆ ಎಗ್ ಬುರ್ಜಿ, ಆಫ್ ಬಾಯ್ಲ್ಡ್, ಎಗ್ ಸಾರು, ಎಗ್ ಚಾಪ್ಸ್,ಎಗ್ ಪಪ್ಸ್ ಬಾಯಿ ನೀರೂರಿಸುತ್ತದೆ. ಆದರೆ, ಬೆಲೆ ಏರಿಕೆ ಸುದ್ದಿ ಕೇಳಿದರೆ ಡೈಲಿ ತಿಂಡಿಗೆ ಹೆಚ್ಚು ದುಡ್ಡು ತೆರಬೇಕಾದ ಅನಿವಾರ್ಯತೆ ಬರುತ್ತದೆ' ಎಂದು ಖಾಸಗಿ ಕಂಪನಿ ಉದ್ಯೋಗಿ ಟೀನಾ ಪ್ರತಿಕ್ರಿಯಿಸಿದ್ದಾರೆ.

'ಮೊಟ್ಟೆ ಪ್ರಿಯ ಎಂದೆ ತನ್ನ ಕಾಲೇಜಿನಲ್ಲಿ ಫೇಮಸ್ ಆಗಿರುವ ರಾಧೇಶ್ಯಾಮ್ ಹೇಳುವ ಪ್ರಕಾರ, '15 ಪೈಸೆ ಅಲ್ಲಾ ಸಾರ್ ನಮ್ಮ ಮನೆ ಕಡೆ 4 ರು ತಗೋತಾರೆ ಮೊಟ್ಟೆಗೆ.. ಆದರೆ, ಬೆಲೆ ಎಷ್ಟೇ ಆಗಲಿ ದಿನಾ ಎಗ್ ತಿಂದ್ರೆ ಸಮಾಧಾನ. ಮೆಕ್ ಡೊನಾಲ್ಡ್ ಅವರು ಮೆಗ್ ಎಗ್ 25 ರು ಗೆ ಕೊಡ್ತಾ ಇದ್ದಾರೆ. ಸದ್ಯಕ್ಕೆ ಅವರು ಬೆಲೆ ಏರಿಸದಿದ್ದರೆ ಸಾಕು. ಎಗ್ ರೋಲ್ ನನ್ನ ಫೇವರೀಟ್ ಈಗಿರುವ 80ರು ನಿಂದ 100 ರು ಆದ್ರೂ ಓಕೆ. ಅದೇ ಬೆಲೆಗೆ ಚಿಕನ್ ಸಿಕ್ಕರೂ ಎಗ್ ರುಚಿಗೆ ಎಗ್ಗಿಲ್ಲ' ಎನ್ನುತ್ತಾರೆ.

English summary
The price of an egg scaled a new high of Rs 3.40 on Wednesday. It is set to rise further in the coming days, driven by escalating feed prices. The farmgate price of egg had touched a high of Rs 3.33 on June 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X