ಗೀತಿಕಾ- ಗೋಪಾಲ್ ಲವ್ ದೋಖಾ ಪ್ರಕರಣ?

Gopal Kanda
ನವದೆಹಲಿ, ಆ.13: ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ ದಿನದಿನಕ್ಕೆ ವಿಚಿತ್ರ ತಿರುವು ಪಡೆಯುತ್ತಿದೆ. ಆರೋಪ ಹೊತ್ತಿರುವ ಹರ್ಯಾಣ ಸಚಿವ ಗೋಪಾಲ್ ಕಾಂಡ ನಾಪತ್ತೆಯಾಗಿದ್ದು, ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಈ ನಡುವೆ ಸಿಕ್ಕಿಬಿದ್ದಿರುವ ಗೋಪಾಲ್ ಆಪ್ತೆ ಅರುಣಾ ಚಡ್ಡಾ ವಿಚಾರಣೆ ವೇಳೆ ಕುತೂಹಲ ಮಾಹಿತಿಯನ್ನು ಹೊರ ಹಾಕಿದ್ದಾರೆ. ಗೀತಿಕಾಗೆ ಗರ್ಭಸ್ರಾವವಾಗಿತ್ತು. ಸಚಿವ ಗೋಪಾಲ್ ಆಕೆಗೆ 400ಕ್ಕೂ ಅಧಿಕ ಎಸ್ ಎಂಎಸ್ ಕಳಿಸಿದ್ದ ಎಂದಿದ್ದಾರೆ.

ಅರುಣಾ ಚಡ್ಡಾ ಹೇಳಿಕೆಯನ್ನು ಖಂಡಿಸಿರುವ ಗೀತಿಕಾ ಸೋದರ ಅಂಕಿತ್, ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬೀಳಲಿದೆ. ಗೋಪಾಲ್ ರನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

ದೆಹಲಿ ಪೊಲೀಸರು ಗೋಪಾಲ್ ಅವರು ಗೀತಿಕಾಗೆ ಕಳಿಸಿದ್ದಾರೆ ಎನ್ನಲಾದ 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಎಸ್ ಎಂಎಸ್ ಗಳನ್ನು ಡಿಕೋಡ್ ಮಾಡಿದ ಮೇಲೆ ಹೆಚ್ಚಿನ ವಿಚಾರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ನಾಪತ್ತೆಯಾಗಿರುವ ಗೋಪಾಲ್ ಕಂಡಾ ಸಾಕ್ಷ್ಯ ನಾಶ ಮಾಡುವ ಭೀತಿ ಎದುರಾಗಿದ್ದು, ಎಂಡಿಎಲ್ ಆರ್ ಕಚೇರಿ ವಶಕ್ಕೆ ಪಡೆಯಲು ಪೊಲೀಸರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

"Few experiences in life cannot be forgiven or forgotten. I will build my career, no matter how many obstacles 'one' puts in my way." ಎಂದು ಅರುಣಾಗೆ ಗೀತಿಕಾ ಬರೆದಿದ್ದ ಪತ್ರ ಸಿಕ್ಕಿದೆ. ತನಿಖೆ ಮುಂದುವರೆದಿದೆ.

ಗೀತಿಕಾ ನಂಬಿಸಿ ಕೈಕೊಟ್ಟಿದ್ದ ಸಚಿವ: ಅರುಣಾ ಚಡ್ಡಾ ಹೇಳಿಕೆ ನಂತರ ಗೋಪಾಲ್ ಹಾಗೂ ಗೀತಿಕಾ ನಡುವಿನ ಸ್ನೇಹಕ್ಕೂ ಮೀರಿದ ಸಂಬಂಧದ ಬಗ್ಗೆ ಇದ್ದ ಶಂಕೆ ಬಲವಾಗಿದೆ. ಗೀತಿಕಾ ಎಂಬಿಎ ಓದಲು 7 ಲಕ್ಷ ನೀಡಿದ್ದ ಗೋಪಾಲ್ ಆಕೆಗೆ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಗಿಫ್ಟ್ ನೀಡಿದ್ದ. ಆದರೆ, ಗೀತಿಕಾ ಕಾರನ್ನು ಹಿಂತಿರುಗಿಸಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಗೀತಿಕಾ ಹಾಗೂ ಗೋಪಾಲ್ ನಡುವೆ ಸ್ನೇಹಕ್ಕೆ ಮೀರಿದ ಸಂಬಂಧ ಇರುವ ಶಂಕೆ ಕೂಡಾ ವ್ಯಕ್ತವಾಗಿತ್ತು. ಇಬ್ಬರು ಶಿರಡಿ, ಮುಂಬೈನಲ್ಲಿ ಓಡಾಡಿದ ಫೋಟೋಗಳು ಸಿಕ್ಕಿದೆ. ಗೀತಿಕಾ ಎಂಬಿಎಗೆ ಧನಸಹಾಯ ಮಾಡಿದ ಗೀತಿಕಾಳ ಸಂಬಂಧಿಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

23 ವರ್ಷದ ಗೀತಿಕಾ ಶರ್ಮ ತನ್ನ ಸೂಸೈಡ್ ನೋಟ್ ನಲ್ಲಿ ಸಚಿವ ಗೋಪಾಲ್ ಹಾಗೂ ಅರುಣ್ ಅವರ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ಸ್ಥಾನ ಗೋಪಾಲ್ ರಾಜೀನಾಮೆ ನೀಡಿದ ಮೇಲೆ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+