ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ ಜಿಲ್ಲಾ ಕ್ರಿಕೆಟ್ : ದಾವಣಗೆರೆ ಚಾಂಪಿಯನ್

By Prasad
|
Google Oneindia Kannada News

Davanagere inter-district cricket champion
ತುಮಕೂರು, ಆ. 10 : 19 ವರ್ಷದೊಳಗಿನ ತುಮಕೂರು ವಲಯ ತಂಡದ ಆಯ್ಕೆಗಾಗಿ ಏರ್ಪಟ್ಟಿದ್ದ ಅಂತರ್ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ದಾವಣಗೆರೆ ಜಿಲ್ಲಾ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಚಾಂಪಿಯನ್ ಆಯಿತು.

ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆದ್ದು, ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡ ತುಮಕೂರು ಜಿಲ್ಲಾ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಚಿತ್ರದುರ್ಗ ಮೂರನೇ ಮತ್ತು ಬಳ್ಳಾರಿ ತಂಡ ನಾಲ್ಕನೇ ಸ್ಥಾನ ಪಡೆದಿವೆ. ದಾವಣಗೆರೆ ತಂಡದ ಸುರೇಶ್ ಎಚ್. ಕರಣಿ (ಅತ್ಯುತ್ತಮ ಆಲ್‌ರೌಂಡರ್), ಕೆ. ಪ್ರಸನ್ನ (ಅತ್ಯುತ್ತಮ ಬೌಲರ್), ಎಸ್. ಸಂಗಮ್ (ಅತ್ಯುತ್ತಮ ಬ್ಯಾಟ್ಸ್‌ಮನ್) ಗೌರವಕ್ಕೆ ಪಾತ್ರರಾದರು.

ವಿಜೇತ ದಾವಣಗೆರೆ ತಂಡಕ್ಕೆ ಟ್ರೋಫಿ ವಿತರಿಸಿದ ತುಮಕೂರು ವಲಯ ಛೇರ್ಮನ್ ಡಾ|| ಸಿ. ಜಯರಾಮರಾವ್ ಮಾತನಾಡಿ, ಜೀವನದಲ್ಲಿ ಶಿಸ್ತು, ಬದ್ಧತೆ, ಏಕಾಗ್ರತೆ ಹಾಗೂ ಕಠಿಣ ಪರಿಶ್ರಮವಿದ್ದರೆ ಅತ್ಯುತ್ತಮವಾದುದನ್ನು ಸಾಧಿಸಬಹುದೆಂದರು.

ರಾಜ್ಯ ತಂಡದ ಮಾಜಿ ಆಟಗಾರ ಜಿ.ಕೆ.ಸತೀಶ್‌ಚಂದ್ರ, ತುಮಕೂರು ವಲಯ ಸಂಯೋಜಕ ಟಿ.ಬಿ. ಪ್ರಶಾಂತ್, ದಾವಣಗೆರೆಯ ಮೋಹನರಾವ್, ಚಿತ್ರದುರ್ಗದ ಎನ್. ಅಶೋಕ್, ಅಕಾಡೆಮಿಕ್ ತರಬೇತುದಾರ ಎಲ್.ಎಂ.ಅಶೋಕ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡೆಲ್ ಕೆ.ಎಸ್.ಸಿ.ಎ. ತುಮಕೂರು ವಲಯದ ವತಿಯಿಂದ ಈ ಟೂರ್ನಿಯನ್ನು ಏರ್ಪಡಿಸಲಾಗಿತ್ತು.

19 ವರ್ಷದೊಳಗಿನವರ ತುಮಕೂರು ವಲಯ ತಂಡ : ಸರ್ವೋದಯ ಪದವಿಪೂರ್ವ ಕಾಲೇಜಿನ ಜೆ. ಭರತ್ (ನಾಯಕ), ಎಚ್.ವಿ. ಮನೋಜ್ ಕುಮಾರ್, ಬಿ.ಟಿ. ಅಕ್ಷಯ ಪ್ರಸಾದ್, ಎ.ಅಭಿಷೇಕ್ ಜಿ.ಟಿ. ಪವನ್ ಕುಮಾರ್, ಎ.ಮಣಿಕಂಠನ್, ಎಚ್.ಬಿ.ಕಿರಣ್ (ತುಮಕೂರು), ಶ್ರೇಯಸ್ ವಿ. ಮೊರ್ರ, ಕೆ.ಪ್ರಸನ್ನ, ಸುರೇಶ್ ಎಚ್.ಕರಣಿ, ಎಸ್.ಸಂಗಮ್ (ದಾವಣಗೆರೆ), ಮನುರವೀಂದ್ರ, ಕೆ.ಸುಹಾಸ್, ಎನ್.ಜಯಂತ್ (ಚಿತ್ರದುರ್ಗ), ಎ.ಎಸ್.ಮೋಹಿತ್, ವಿವೇಕ್ ಎಂ.ಹಿರೇಮಠ್ (ಬಳ್ಳಾರಿ) ಆಯ್ಕೆಯಾಗಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ತುಮಕೂರಿನ ಟಿ.ಎಸ್. ಮಂಜುನಾಥ್ ಮತ್ತು ತರಬೇತುದಾರರಾಗಿ ದಾವಣಗೆರೆಯ ಎಲ್.ಎಂ.ಲೋಕೇಶ್ ಅವರು ನೇಮಕಗೊಂಡಿದ್ದಾರೆ.

English summary
Davanagere district team has won inter-district cricket championship by defeating Tumkur. The tournament was organized in Tumkur to select cricket team for Tumkur zone. Tumkur team is the first runner up. Chitradurga and Bellary satisfied with 3rd and 4th position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X