Get Updates
Get notified of breaking news, exclusive insights, and must-see stories!

ಬಿಜೆಪಿಗೆ ಬಹುಮತವಿಲ್ಲ, ಆದರೆ, ಪ್ರಧಾನಿ ಪಟ್ಟ ಸಿಗಲಿದೆ

Cong or BJP support must for any govt in India:Advani
ನವದೆಹಲಿ, ಆ.5: ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಲಾಭ ಕಾಂಗ್ರೆಸ್ ಪಡೆಯಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಹೇಳಲು ಕಷ್ಟವಾಗುತ್ತದೆ. ಆದರೆ, ಇದು ವಾಸ್ತವ ಸತ್ಯ. ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ.

ಇದೇ ರೀತಿ ಲೋಕಸಭೆ ಚುನಾವಣೆ 2014ರಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತ ಪಡೆಯಲು ಸಾಧ್ಯವಿಲ್ಲ ಆದರೆ, ಯಾರೇ ಸರ್ಕಾರ ರಚಿಸಲು ಈ ಎರಡರಲ್ಲಿ ಒಂದು ಪಕ್ಷದ ಬೆಂಬಲ ಬೇಕೇ ಬೇಕಾಗುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ.

ಆದರೆ, ತೃತೀಯ ರಂಗದ ರಚನೆಯನ್ನು ತಳ್ಳಿ ಹಾಕಿದ ಅಡ್ವಾಣಿ ಅವರು ಇತಿಹಾಸವನ್ನು ಅವಲೋಕಿಸಿ ಹೇಳುವುದಾದರೆ, ಈ ರೀತಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲದಿಂದ ರಚಿತವಾದ ಸರ್ಕಾರ ಬಹುಕಾಲ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಚರಣ್ ಸಿಂಗ್, ಚಂದ್ರಶೇಖರ್ ಜೀ, ದೇವೇಗೌಡಜೀ ಹಾಗೂ ಇಂದರ್ ಕುಮಾರ್ ಜೀ ಗುಜ್ರಾಲ್(ಕಾಂಗ್ರೆಸ್ ಬೆಂಬಲಿತ) ಸರ್ಕಾರ ಹಾಗೂ ವಿಶ್ವನಾಥ್ ಪ್ರತಾಪ್ ಸಿಂಗ್ ಜೀ(ಬಿಜೆಪಿ ಬೆಂಬಲಿತ) ಸರ್ಕಾರಗಳು ಎಷ್ಟು ಕಾಲ ರಾಜ್ಯಭಾರ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದವರು ಪ್ರಧಾನಿಯಾದರೆ ಮಾತ್ರ ಸ್ಥಿರತೆ ಸಾಧ್ಯ ಎಂದು ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಮುಂಬರುವ ಲೋಕಸಭೆ ಚುನಾವಣೆ 2014ಯಲ್ಲಿ ಯುಪಿಎ ಮೈತ್ರಿಕೂಟವನ್ನು ಎನ್ ಡಿಎ ಮಿತ್ರಪಕ್ಷಗಳು ಸೋಲಿಸುವುದು ಖಚಿತ. ಯುಪಿಎ 1 ಹಾಗೂ ಯುಪಿಎ II ಸರ್ಕಾರದ ಶೂನ್ಯ ಸಾಧನೆಯಿಂದ ಸಾರ್ವಜನಿಕರು ತತ್ತರಿಸಿದ್ದಾರೆ ಎಂದು ಅಡ್ವಾಣಿ ಹೇಳಿದ್ದಾರೆ.

1952ರ ನಂತರ ಅತ್ಯಂತ ಕಳಪೆ ಸಾಧನೆ ತೋರುವ ಮೂಲಕ ಯುಪಿಎ ಹೀನಾಯ ಸೋಲು ಅನುಭವಿಸಲಿದೆ. ಭವಿಷ್ಯವಾಣಿಯ ಪ್ರಕಾರ ಕಾಂಗ್ರೆಸ್ 100ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಜಯ ಗಳಿಸುವುದು ಸಾಧ್ಯವಿಲ್ಲ ಎನ್ನಲಾಗಿದೆ. ಜನ ಬದಲಾವಣೆ ಬಯಸಿದ್ದಂತೆ ಆಗುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರಧಾನಿ: ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೂ ಕಡಿಮೆ ಸ್ಥಾನ ಪಡೆಯುವುದರಿಂದ, ಬಿಜೆಪಿ ಅಭ್ಯರ್ಥಿ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ.ಬಿಜೆಪಿ ನೇತೃತ್ವದ ಎನ್ ಡಿಎ ನಡೆಸಿರುವ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಲೆ ಸಿಗಲಿದೆ. ಹೀಗಾಗಿ ಬಹುಮತ ದೊರೆಯದಿದ್ದರೂ ಬಿಜೆಪಿ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬರುವುದು ಖಚಿತ ಎಂದು ಅಡ್ವಾಣಿ ಹೇಳಿದ್ದಾರೆ.

ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಘೋಷಣೆ ಮಾಡುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಅಡ್ವಾಣಿ, ಪ್ರಧಾನಿ ಹುದ್ದೆ ಅಲಂಕರಿಸುವವರು ಎಲ್ಲಾ ಧರ್ಮಗಳ ಬಗ್ಗೆ ಗೌರವ ಹೊಂದಿರಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+