• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಣೆಯಲ್ಲಿ ಸರಣಿ ಬಾಂಬ್ ಸ್ಫೋಟ, ದೇಶದಾದ್ಯಂತ ಕಟ್ಟೆಚ್ಚರ

By Prasad
|
ಪುಣೆ, ಆ. 1 : ಬುಧವಾರ ಸಂಜೆ ಪುಣೆಯಲ್ಲಿ 4 ಬಾಂಬ್‌ಗಳು ಸ್ಫೋಟಗೊಂಡಿದ್ದು, ಮತ್ತೆ ಭಯೋತ್ಪಾದನೆಯ ಭೀತಿಯ ವಾತಾವರಣ ಬಿತ್ತಿವೆ. ಇನ್ನೂ 2 ಜೀವಂತ ಬಾಂಬ್ ಸ್ಪೋಟಗೊಳ್ಳುವ ಮುನ್ನ ಅವನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಸರಣಿ ಸ್ಫೋಟದಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

ಜಂಗ್ಲಿ ಮಹಾರಾಜ್ ರಸ್ತೆಯಲ್ಲಿ ಬಾಲಗಂಧರ್ವ ಥಿಯೇಟರ್ ಎದುರಿನಲ್ಲಿ, ದೆಹಲಿಯಲ್ಲಿ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಸ್ಥಳದಲ್ಲಿ ಸಂಜೆ 7.30ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದೆ. ನಂತರ 1 ಗಂಟೆಯ ಅಂತರದಲ್ಲಿ ಅದೇ ರಸ್ತೆಯಲ್ಲಿ ಇನ್ನೂ ನಾಲ್ಕು ಬಾಂಬ್ ಗಳು ಸ್ಫೋಟಗೊಂಡಿವೆ.

ಎಲ್ಲ ಬಾಂಬ್ ಗಳು ಕಡಿಮೆ ಪ್ರಭಾವದವಾಗಿದ್ದು, ಒಂದು ಸ್ಫೋಟದಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ತೊಡಗಿದ್ದ ದಯಾನಂದ ಪಾಟೀಲ್ ಎಂಬುವವರು ಗಾಯಗೊಂಡಿದ್ದಾರೆ. ಬಾಂಬನ್ನು ಪಾಲಿಥಿನ್ ಬ್ಯಾಗ್‌ನಲ್ಲಿ ಇಡಲಾಗಿತ್ತು. ಈ ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಜಂಗ್ಲಿ ಮಹಾರಾಜ ರಸ್ತೆಯಲ್ಲಿರುವ ಬಾಲಗಂಧರ್ವ ಥಿಯೇಟರ್, ದೇನಾ ಬ್ಯಾಂಕ್, ಮ್ಯಾಕ್ ಡೊನಾಲ್ಡ್ ಔಟ್‌ಲೆಟ್, ಗರಬಾರೆ ಚೌಕ್ ಬಳಿ ಸ್ಫೋಟ ಸಂಭವಿಸಿವೆ. ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ 2 ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಿತು. ಪೊಲೀಸರು ಇಡೀ ಪ್ರದೇಶಗಳನ್ನು ಸುತ್ತುವರಿದಿದ್ದು, ಪುಣೆ ಮೇಯರ್ ಆಗಿರುವ ವೈಶಾಲಿ ಅವರು ಯಾರೂ ಗಾಬರಿಗೊಳ್ಳಬಾರದು ಎಂದು ಕರೆ ನೀಡಿದ್ದಾರೆ.

ನೂತನ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಥೆ ಅವರು ಪುಣೆಯ ತಿಲಕ್ ಆಡಿಟೋರಿಯಂನಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಸಂಜೆ 6 ಗಂಟೆಗೆ ಭಾಗವಹಿಸುವವರಿದ್ದರು.

ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ : ಅಣ್ಣಾ ಹಜಾರೆಯವರನ್ನು ಬೆಂಬಲಿಸಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ನಡೆಸುತ್ತಿದ್ದ ಪೆಂಡಾಲ್ ಬಳಿ ಸ್ಫೋಟ ಸಂಭಿಸಿದ್ದರಿಂದ ನವದೆಹಲಿಯ ಅಣ್ಣಾ ಹಜಾರೆ ಉಪವಾಸಕ್ಕೆ ಕುಳಿತಿರುವ ಜಂತರ್ ಮಂತರ್‌ನಲ್ಲಿ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಗಡಿ ಪ್ರದೇಶದಲ್ಲಿಯೂ ಭದ್ರತೆ ಒದಗಿಸಿರುವುದಾಗಿ ಬೆಳಗಾವಿಯ ಎಸ್ಪಿ ಸಂದೀಪ್ ಪಾಟೀಲ್ ಅವರು ನೀಡಿರುವುದಾಗಿ ಹೇಳಿದ್ದಾರೆ.

ಕಟ್ಟೆಚ್ಚರದಿಂದಿರಲು ಸೂಚನೆ : ಪುಣೆಯಲ್ಲಿ ಸಂಭವಿಸಿರುವ ಸರಣಿ ಸ್ಫೋಟವನ್ನು ಹಗುರವಾಗಿ ಪರಿಗಣಿಸಬಾರದು. ಇದು ಮುಂದಿನ ಭಾರೀ ಅನಾಹುತಕ್ಕೆ ಮುನ್ಸೂಚನೆಯಾಗಿರಬಹುದು ಎಂದು ಕೇಂದ್ರ ಗುಪ್ತಚರ ದಳ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರದಿಂದಿರಲು ಸೂಚಿಸಲಾಗಿದೆ. ಎಲ್ಲ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರತಿಭಟನೆ ರದ್ದು : ಇಂಡಿಯಾ ಅಗೇನ್ಸ್ಟ್ ಕರಪ್ಶನ್ ಕಾರ್ಯಕರ್ತರು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಬೆಂಗಳೂರು ನಿವಾಸದೆದಿರು ಪ್ರತಿಭಟನೆ ನಡೆಸುವ ಕಾರ್ಯಕ್ರಮವನ್ನು ಬುಧವಾರ ರಾತ್ರಿ 9.30ಕ್ಕೆ ಹಮ್ಮಿಕೊಂಡಿದ್ದರು. ಪುಣೆಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರೇ ಇದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four bomb blasts rocked Pune creating a panic situation in the area. The first blast took place near Bal Gandharv theatre, where India Against Corruption activists were fasting in support of Anna Hazare.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more