ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.28: ಭಾರತದ ಕ್ರೀಡಾಪಟುಗಳ ಏಳು ಬೀಳು

By Mahesh
|
Google Oneindia Kannada News

July 28: How did India fare at London Olympics?
ಲಂಡನ್, ಜು.29: ಲಂಡನ್ ಒಲಿಂಪಿಕ್ಸ್‌ನ ಮೊದಲ ದಿನ ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ಕಶ್ಯಪ್, ಟೇಬಲ್ ಟೆನಿಸ್ ಆಟಗಾರ್ತಿ ಸೌಮ್ಯಜಿತ್ ಘೋಷ್ ಎರಡನೆ ಸುತ್ತು ಪ್ರವೇಶಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಆದರೆ, ಯುವ ಬಾಕ್ಸರ್ ಶಿವ ಥಾಪಾ ಹಾಗೂ ಟೇಬಲ್ ಟೆನಿಸ್ ಆಟಗಾರ್ತಿ ಅಂಕಿತಾ ದಾಸ್ ಮೊದಲ ಸುತ್ತಿನಲ್ಲೇ ನಿರ್ಗಮಿಸಿ ನಿರಾಶೆ ಮೂಡಿಸಿದ್ದಾರೆ.

ಭಾನುವಾರ(ಜು.29) ಸೈನಾ ನೈಹ್ವಾಲ್ ತಮ್ಮ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದಾರೆ. ಶನಿವಾರ ಭಾರತದ ಕ್ರೀಡಾಳುಗಳ ಪ್ರದರ್ಶನ, ಫಲಿತಾಂಶ ವಿವರ ಇಲ್ಲಿದೆ:

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್‌ನಲ್ಲಿ ಪಿ. ಕಶ್ಯಪ್ ಜಯ ಸಾಧಿಸಿದರೆ, ಜ್ವಾಲಾ ಗುಟ್ಟಾ ಅವರು ಮಿಕ್ಸೆಡ್ ಡಬಲ್ಸ್ ಹಾಗೂ ಡಬಲ್ಸ್ ಪಂದ್ಯಗಳ ಮೊದಲ ಸುತ್ತಿನಲ್ಲಿ ಸೋಲನುಭವಿಸಿ ನಿರಾಶೆಗೊಳಿಸಿದ್ದಾರೆ.

25ರ ಹರೆಯದ ಕಶ್ಯಪ್ ಬೆಲ್ಜಿಯಂನ ಯುಹ್ಯಾನ್ ಥ್ಯಾನ್ ವಿರುದ್ಧ 21-14, 21-12 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಕೇವಲ 27 ನಿಮಿಷಗಳ ಕಾಲ ನಡೆದ ಮಿಕ್ಸೆಡ್ ಡಬಲ್ಸ್‌ನಲ್ಲಿ ಜ್ವಾಲಾ-ಡಿಜು ಜೋಡಿ ಇಂಡೋನೇಷ್ಯಾದ ಅಹ್ಮದ್- ನಾಸಿರ್ ಜೋಡಿ ವಿರುದ್ಧ 21-16, 21-12 ಸೆಟ್‌ಗಳಿಂದ ಸೋಲನುಭವಿಸಿದರು. ಡಬಲ್ಸ್‌ನಲ್ಲಿ ಜ್ವಾಲಾ-ಅಶ್ವಿನಿ ಪೊನ್ನಪ್ಪ ಜೋಡಿ ಜಪಾನ್‌ನ ಮಿಜುಕಿಫುಜಿ-ರೈಕಾ ಕಾಕಿವಾ ವಿರುದ್ಧ 21-16, 21-18 ಸೆಟ್‌ಗಳಿಂದ ಸೋಲನುಭವಿಸಿದರು.

ಟೇಬಲ್ ಟೆನಿಸ್: ಸಿಂಗಲ್ಸ್ ಪಂದ್ಯದಲ್ಲಿ ಸೌಮ್ಯಜಿತ್ ಘೋಷ್ ಎರಡನೆ ಸುತ್ತಿಗೆ ಪ್ರವೇಶಿಸಿದರೆ, ಮಹಿಳೆಯರ ಸಿಂಗಲ್ಸ್ ನಲ್ಲಿ ಅಂಕಿತಾ ದಾಸ್ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಘೋಷ್ ಬ್ರೆಝಿಲ್‌ನ ಗುಸ್ತಾವೊ ಸಬೊಯ್ ವಿರುದ್ಧ 11-9, 14-12, 7-11, 12-10, 5-11, 12-10 ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಚೊಚ್ಚಲ ಒಲಿಂಪಿಕ್ಸ್ ಆಡಿದ ಅಂಕಿತಾ ಸ್ಪೇನ್‌ನ ಸಾರಾ ರಮಿರೆಝ್ ವಿರುದ್ಧ 9-11, 8-11, 7-11, 2-11 ರಿಂದ ಸೋಲನುಭವಿಸಿದರು.

ರೋಯಿಂಗ್: ಪುರುಷರ ಸಿಂಗಲ್ಸ್ ಸ್ಕಲ್ಸ್ ಹೀಟ್ಸ್ ಪೈಪೋಟಿಯಲ್ಲಿ ಭಾರತದ ಸ್ವರ್ಣ ಸಿಂಗ್ ವಿರ್ಕ್ 4ನೆ ಸ್ಥಾನ ಪಡೆದು ಮುಂದಿನ ಸುತ್ತಿಗೇರುವ ವಿಶ್ವಾಸ ಮೂಡಿಸಿದರು. ವಿರ್ಕ್ 2 ಕಿ.ಮೀ. ದೂರವನ್ನು 6:54:04 ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿದರು. ರವಿವಾರ ರಿಪಿಚೇಜ್ ಸುತ್ತಿನಲ್ಲಿ ಸ್ಪರ್ಧಿಸಲಿರುವ ವಿರ್ಕ್‌ಗೆ ಮುಂದಿನ ಸುತ್ತಿಗೇರುವ ಅವಕಾಶವಿದೆ.

ಆರ್ಚರಿ: ಪುರುಷರ ಟೀಮ್ ಆರ್ಚರಿಯಲ್ಲಿ ಭಾರತ ತಂಡ ಜಪಾನ್ ವಿರುದ್ಧ 27-29 ರಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದೆ. ಜಯಂತ್‌ತಾಲೂಕ್ದಾರ್, ರಾಹುಲ್ ಬ್ಯಾನರ್ಜಿ ಹಾಗೂ ತರುಣ್‌ದೀಪ್ ಒಳಗೊಂಡ ಭಾರತದ ಪುರುಷರ ತಂಡ ಜಪಾನ್‌ನ ಯೂ ಇಶಿಝೂ, ಹಿಡೆಕಿ ಕಿಕೂಚಿ ಹಾಗೂ ತಕಹಾರು ತರುಕಾರ ವಿರುದ್ಧ ಸೋಲನುಭವಿಸಿತು. ಜಯಂತ್, ರಾಹುಲ್, ತರುಣ್ ಸೋಮವಾರ ನಡೆಯಲಿರುವ ವೈಯಕ್ತಿಕ ಆರ್ಚರಿ ಯಲ್ಲಿ ಭಾಗವಹಿಸಲಿದ್ದಾರೆ.

ಶೂಟಿಂಗ್: ಪುರುಷರ 10 ಮೀ. ಏರ್‌ಪಿಸ್ತೂಲ್‌ನಲ್ಲಿ 31ನೆ ಸ್ಥಾನ ಪಡೆದ ಶೂಟರ್ ವಿಜಯಕುಮಾರ್ ಫೈನಲ್ ತಲುಪಲು ವಿಫಲರಾದರು. ಅಗ್ರ 8 ಸ್ಥಾನಕ್ಕೆ 44 ಶೂಟರ್‌ಗಳು ಭಾಗವಹಿಸಿದ್ದು, ವಿಜಯ್ 600ರಲ್ಲಿ 570 ಅಂಕಗಳನ್ನು ಗಳಿಸಿದರು. ವಿಜಯ್ ಆ.2 ರಂದು ನಡೆಯಲಿರುವ 25 ಮೀ. ರ್ಯಾಪಿಡ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬಾಕ್ಸಿಂಗ್: ಭಾರತ 18ರ ಹರೆಯದ ಯುವ ಬಾಕ್ಸರ್ ಶಿವ ಥಾಪ ಮೆಕ್ಸಿಕೊದ ಒಸ್ಕರ್ ವೆಲ್‌ಡಿಝ್ ವಿರುದ್ಧ 56 ಕೆಜಿ ವಿಭಾಗದಲ್ಲಿ 14-9 ರಿಂದ ಸುಲಭವಾಗಿ ಶರಣಾದರು.

ಜೂಡೊ: 48 ಕೆಜಿ ವಿಭಾಗದಲ್ಲ್ಲಿ ಚಿನ್ನದ ಪದಕ ಗೆದ್ದ ಸಾರಾ ಮೆನೆಝಿಸ್ ಈ ಸಾಧನೆ ಮಾಡಿದ ಮೊದಲ ಬ್ರೆಜಿಲ್ ಮಹಿಳೆ ಎಂದು ಕೀರ್ತಿಗೆ ಪಾತ್ರರಾದರು.

ಶೂಟಿಂಗ್: ಪುರುಷರ 10 ಮೀ. ಏರ್‌ಪಿಸ್ತೂಲ್‌ನಲ್ಲಿ ದಕ್ಷಿಣ ಕೊರಿಯದ ಶಾರ್ಪ್‌ಶೂಟರ್ ಜಿನ್ ಜೊಂಗ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ವೇಟ್‌ಲಿಫ್ಟಿಂಗ್: ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಸೋನಿಯಾ ಚಾನು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿ 7ನೆ ಸ್ಥಾನವನ್ನು ಪಡೆದಿದ್ದಾರೆ. ಚೀನಾದ ಮಿಂಗ್‌ಜುಯಾನ್‌ವಾಂಗ್ ಚಿನ್ನದ ಪದಕವನ್ನು ಗೆದ್ದುಕೊಂಡರು.

English summary
Shuttler P Kashyap was the sole saving grace on an otherwise dismal day for India on the first day of competitions at the London Olympic Games. Young medal hopeful Shiva Thapa's first-round exit in the boxing ring. woman paddler Ankita Das making her exit without making a ripple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X