• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಡನ್ ಪೆರೇಡ್ ನಲ್ಲಿದ್ದ ಯುವತಿ ಗುರುತು ಪತ್ತೆ

By Mahesh
|

ಲಂಡನ್, ಜು.29: ಲಂಡನ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪಥ ಸಂಚಲನ ವೇಳೆ ಧ್ವಜಧಾರಿ ಸುಶೀಲ್ ಕುಮಾರ್ ಪಕ್ಕದಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಗುರುತು ಪತ್ತೆಯಾಗಿದೆ.ನೀಲಿ ಹಾಗೂ ಕೆಂಪು ಬಣ್ಣದ ಉಡುಗೆ ತೊಟ್ಟು ಪೆರೇಡ್ ನಲ್ಲಿ ಕ್ರೀಡಾಳುಗಳ ಜೊತೆ ಕೈ ಬೀಸಿ ನಡೆದಿದ್ದು ಬೆಂಗಳೂರಿನ ಬನಶಂಕರಿ ಮೂಲದ ಮಧುರಾ ಹನಿ ಎಂದು ದೃಢಪಟ್ಟಿದೆ.

'ಲಂಡನ್ ಒಲಿಂಪಿಕ್ಸ್ ನ ಉದ್ಘಾಟನಾ ಕಾರ್ಯಕ್ರಮದ ನೃತ್ಯಕ್ಕಾಗಿ ನನ್ನ ಮಗಳು ಮಧುರಾ ಆಯ್ಕೆಯಾಗಿದ್ದಳು. ಹೀಗಾಗಿ ಅವಳಿಗೆ ಮೈದಾನಕ್ಕೆ ಪ್ರವೇಶಿಸುವ ಅರ್ಹತೆ ಸಿಕ್ಕಿತ್ತು. ಆದರೆ, ಪೆರೇಡ್ ನಲ್ಲಿ ಕಾಣಿಸಿಕೊಂಡಿದ್ದು ನಮಗೂ ಅಚ್ಚರಿ ತಂದಿದೆ' ಎಂದು ಮಧುರಾಳ ತಂದೆ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಧುರಾ, ಉನ್ನತ ವ್ಯಾಸಂಗಕ್ಕಾಗಿ ಲಂಡನ್ ಗೆ ತೆರಳಿದ್ದರು. ಆಕೆ ನೃತ್ಯಪಟುವಾದ್ದರಿಂದ ಆಕೆಗೆ ಒಲಿಂಪಿಕ್ಸ್ ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು. ಇದನ್ನು ಮಧುರಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಚಿತ್ರ ಸಮೇತ ಹೇಳಿಕೊಂಡಿದ್ದರು. ಒಲಿಂಪಿಕ್ಸ್ ಪಾಸ್ ಹೊಂದಿದ್ದ ಆಕೆ ಚಿತ್ರ ಪ್ರಕಟವಾಗಿತ್ತು.

ಆದರೆ, ಪಥಸಂಚಲನ ವೇಳೆ ಕಾಣಿಸಿಕೊಂಡು ವಿವಾದ ಸೃಷ್ಟಿಯಾದ ಮೇಲೆ ಆಕೆ ತನ್ನ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿರುವುದು ಕಂಡು ಬಂದಿದೆ.

ಪುರುಷ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಸೂಟು ಧರಿಸಿ ನಡೆಯುತ್ತಿದ್ದರೆ, ಮಹಿಳಾ ಕ್ರೀಡಾಳುಗಳು ಹಳದಿ ಬಣ್ಣದ ಸೀರೆಯ ನೆರಿಗೆಗಳನ್ನು ಚೆಲ್ಲುತ್ತ ಕಂಗೊಳಿಸುತ್ತಿದ್ದರು. ಆದರೆ, ಅವರ ನಡುವಿನಲ್ಲಿ ನೀಲಿ ಪ್ಯಾಂಟ್ ಮತ್ತು ಕೆಂಪು ಅಂಗಿ ತೊಟ್ಟಿದ್ದ ಅಪರಿಚಿತ ಯುವತಿ ಕಂಡು ಒಲಿಂಪಿಕ್ಸ್ ತಂಡ Chef De Mission ಪಿಕೆ ಮುರಳಿಧರನ್ ಕೆಂಡಾಮಂಡಲವಾಗಿದ್ದರು.

ಭಾರತವನ್ನು ಪ್ರತಿನಿಧಿಸುವ ಆಟಗಾರರೊಡನೆ ಪಥಸಂಚಲನದಲ್ಲಿ ಭಾಗವಹಿಸಲು ಆಕೆಯನ್ನು ಬಿಟ್ಟಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಆ ಯುವತಿ ಸ್ಟೇಡಿಯಂ ಒಳಗಿನ ಟ್ರಾಕ್ ತನಕ ಮಾತ್ರ ಬರುತ್ತಾಳೆಂದು ಮೊದಲು ತಿಳಿಸಲಾಗಿತ್ತು.

ಆದರೆ, ಆಕೆ ಭಾರತೀಯ ಆಟಗಾರರ ಜೊತೆ ಇಡೀ ಸ್ಟೇಡಿಯಂ ಸುತ್ತಿದಳು. ನಮ್ಮ ಗುಂಪಿನಲ್ಲಿ ಇನ್ನೊಬ್ಬನೂ ಸೇರಿದ್ದ. ಆದರೆ, ಆತ ಮಾತ್ರ ಸ್ಟೇಡಿಯಂ ಒಳಗಡೆ ಪ್ರವೇಶಿಸಲಿಲ್ಲ. ಪಥಸಂಚಲ ಭಾರತೀಯ ಕ್ರೀಡಾಳುಗಳಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ ಅನ್ಯರು ಮಧ್ಯ ಪ್ರವೇಶಿಸಲು ಬಿಟ್ಟಿದ್ದು ನಿಜಕ್ಕೂ ಆಶ್ಚರ್ಯ ತಂದಿದೆ" ಎಂದು ಮುರಳಿಧರನ್ ಹೇಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The unidentified woman clad in red and blue marching with the Indian contingent at the London Olympics opening ceremony on July 27 was found to be Madhura Honey, a post-graduate student from Bangalore. There were speculations all around after media focussed on her, even raising questions over the security standards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more