ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ವಿರುದ್ಧ ಮತ್ತೆ ಲೋಕಾಯುಕ್ತ ತನಿಖೆ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಜು.25: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಸಂಸದ ಬಿವೈ ರಾಘವೇಂದ್ರ ಅವರ ಮೇಲೆ ಮತ್ತೊಂದು ಭೂ ಹಗರಣ ಪ್ರಕರಣ ದೂರು ದಾಖಲಾಗಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿ ಡಿನೋಟಿಫಿಕೇಷನ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಲೋಕಾಯುಕ್ತ ಪೊಲೀಸರ ತನಿಖೆ ಎದುರಿಸಬೇಕಾಗುತ್ತದೆ.

ಶಿವಮೊಗ್ಗದ ವಕೀಲ ಬಿ ವಿನೋದ್ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾ ಎನ್ ಕೆ ಸುಧೀಂದ್ರರಾವ್ ಅವರು ಯಡಿಯೂರಪ್ಪ,ರಾಘವೇಂದ್ರ ಸೇರಿದಂತೆ ಐದು ಜನರ ಮೇಲೆ ಸಿಆರ್ ಪಿಸಿ ಸೆಕ್ಷನ್ 202ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ (ಜು.24)ಆದೇಶ ನೀಡಿದರು.

ಬೆಂಗಳೂರು ನಗರ ಲೋಕಾಯುಕ್ತ ಡಿಎಸ್ ಪಿ ನಹದ್ ಅವರು ಈ ಪ್ರಕರಣದ ತನಿಖೆ ಕೈಗೊಳ್ಳುವ ಅಧಿಕಾರಿಯಾಗಿದ್ದಾರೆ. ದೂರುದಾರ ವಿನೋದ್ ಅವರು ಕೋರ್ಟಿಗೆ ಸಲ್ಲಿಸಿರುವ ದೂರು ಅರ್ಜಿ ಹಾಗೂ ಇತರೆ ದಾಖಲಾತಿಯ ಒಂದು ಪ್ರತಿಯನ್ನು ತನಿಖಾಧಿಕಾರಿಗಳಿಗೆ ನೀಡಬೇಕಾಗುತ್ತದೆ. ಸಿಆರ್ ಪಿಸಿ 202 ಅಡಿಯಲ್ಲಿ ದೂರು ದಾಖಲಾಗಿರುವುದರಿಂದ ಸದ್ಯಕ್ಕೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸುವುದಿಲ್ಲ.

ಆದರೆ, ತನಿಖೆ ಸಂದರ್ಭದಲ್ಲಿ ಅಕ್ರಮ ಒತ್ತುವರಿ ಆರೋಪಗಳು ಸಾಬೀತುಪಡಿಸುವ ಅಂಶಗಳು ಕಂಡು ಬಂದರೆ ಎಫ್ ಐಆರ್ ದಾಖಲಿಸಲು ಲೋಕಾಯುಕ್ತ ಕೋರ್ಟ್ ಅನುಮತಿ ಕೋರಬಹುದಾಗಿದೆ. ಕೋರ್ಟ್ ಅನುಮತಿ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸಬಹುದು. ಅಥವಾ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೆ ದೂರು ರದ್ದಾಗುತ್ತದೆ.

2010ರಲ್ಲಿ ಭದ್ರಾವತಿ ಬಳಿ ಅಕ್ರಮವಾಗಿ 69 ಎಕರೆ ಅರಣ್ಯವನ್ನು ಒತ್ತುವರಿ ಮಾಡಿ, ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಡಿನೋಟಿಫೈ ಆದ ಮೇಲೆ ಧವಳಗಿರಿ ಪ್ರಾಪರ್ಟಿಸ್ ಬೇನಾಮಿ ಹೆಸರು ಖಾತೆ ಹೆಸರಿನಲ್ಲಿ ಖರೀದಿಸಲಾಗಿದೆ.

ಭದ್ರಾವತಿ ಸುತ್ತಾ ಮುತ್ತಾ ಸುಮಾರು 250 ಎಕರೆಗೂ ಅಧಿಕ ಅರಣ್ಯ ಭೂಮಿಯನು ರಕ್ಷಿತಾರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ, 2010-2011ರ ಅವಧಿಯಲ್ಲಿ ಅಕ್ರಮವಾಗಿ ಒತ್ತುವರಿ ಮೂಲಕ ಅಪಾರ ಹಣವನ್ನು ಯಡಿಯೂರಪ್ಪ ಸಂಗ್ರಹಿಸಿದ್ದಾರೆ ಎಂದು ವಿನೋದ್ ಆರೋಪಿಸಿದ್ದಾರೆ.

English summary
The Lokayukta Court on Tuesday(Jul.24) ordered a probe on Former chief minister BS Yeddyurappa and his son BY Raghavendra in a complaint filed against him and his son alleging illegal denotification of land in Bhadravathi. BS Yeddyurappa allegedly denotified 69 acres of forest land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X