ಟಿಸಿಎಸ್, ಇನ್ಫಿ, ವಿಪ್ರೋ ಮೀರಿ ನಿಂತ ಎ‌ಚ್ ಸಿಎಲ್ ಲಾಭ

CEO Vineet Nayar
ಬೆಂಗಳೂರು, ಜು.25: ಭಾರತದ ನಾಲ್ಕನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಎಚ್ ಸಿಎಲ್ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬುಧವಾರ (ಜು.25) ಪ್ರಕಟಿಸಿದೆ. ಜೂನ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಲಾಭ ಗಳಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ 854.1 ಕೋಟಿ ರು.ನಂತೆ ಶೇ 67.3 ರಷ್ಟು ನಿವ್ವಳ ಲಾಭ ಗಳಿಸಿದೆ.

ಸದ್ಯ ಪ್ರಕಟಗೊಂಡಿರುವ ತ್ರೈಮಾಸಿಕ ವರದಿಗಳ ಪೈಕಿ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸಂಸ್ಥೆಗಿಂತ ಎಚ್ ಸಿಎಲ್ ಸಂಸ್ಥೆ ಹೆಚ್ಚಿನ ಪ್ರಗತಿ ಸಾಧಿಸಿದೆ.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 510.5 ನಿವ್ವಳ ಲಾಭ ಗಳಿಸಿತ್ತು. ಸಂಸ್ಥೆಯ ಒಟ್ಟಾರೆ ಆದಾಯವೂ ಏರಿಕೆ ಕಂಡಿದೆ. ಶೇ 37.7 ರಷ್ಟು ಪ್ರಗತಿಯೊಂದಿಗೆ ನಿವ್ವಳ ಆದಾಯ 5,919.1 ಕೋಟಿ ರು ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ 4,299.5 ಕೋಟಿ ರು ಮಾತ್ರ ಗಳಿಸಿತ್ತು. ಡಾಲರ್ ಆದಾಯ 1080 ಮಿಲಿಯನ್ ಡಾಲರ್ ಶೇ 3.0 ಏರಿಕೆ QoQ ಹಾಗೂ 12.1% YoY.

'ಐದು ಪಟ್ಟು ಪ್ರಗತಿ 100 ಮಿಲಿಯನ್ ಗೂ ಅಧಿಕ ಗ್ರಾಹಕರು, ಆದಾಯ(21,031 ಕೋಟಿ ರು) ದಲ್ಲಿ 31% ಹಾಗೂ EBITDAನಲ್ಲಿ ಶೇ 54 ರಷ್ಟು ಪ್ರಗತಿ(4025 ಕೋಟಿ ಗಳಿಕೆ) ಮತ್ತು year on year ನಲ್ಲಿ ಶೇ 48ರಷ್ಟು ಆದಾಯ ಈ ಸಂಖ್ಯೆಗಳೇ ನಮ್ಮ ಪ್ರಗತಿಯನ್ನು ಸೂಚಿಸುತ್ತದೆ. ಸಂಸ್ಥೆ ಹಾಕಿರುವ ಗುರಿಯತ್ತ ಸಾಗಲು ಎಲ್ಲಾ ಸಿಬ್ಬಂದಿಯ ಸಹಕಾರ ಕಾರಣವಾಗಿದೆ' ಎಂದು ಎಚ್ ಸಿಎಲ್ ಟೆಕ್ನಾಲಜೀಸ್ ನ ಉಪಾಧ್ಯಕ್ಷ ಹಾಗೂ ಸಿಇಒ ವಿನೀತ್ ನಾಯರ್ ಹೇಳಿದ್ದಾರೆ.

ಎಚ್ ಸಿಎಲ್ ಬೋರ್ಡ್ ಆಫ್ ಡೈರೆಕ್ಟರ್ಸ್ ಶಿಫಾರಿಸಿನಂತೆ 2 ರು ಬೆಲೆಯ ತಲಾ ಷೇರುಗಳ ಅಂತಿಮ ಡಿವಿಡೆಂಡ್ 4 ರು ಪ್ರತಿ ಈಕ್ವಿಟಿ ಪ್ರಕಟಿಸಲಾಗಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ 7,008 ಜನರನ್ನು ನೇಮಕ ಮಾಡಿಕೊಂಡಿದೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 84,319ಕ್ಕೇರಿದೆ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದ ಅವಧಿಯಲ್ಲಿ Attrition ಮಟ್ಟ ಶೇ 14ರಷ್ಟಿತ್ತು.

ಈ ಅವಧಿಯಲ್ಲಿ ಎಂಟಕ್ಕೂ ಹೆಚ್ಚು ಬಹು ವಾರ್ಷಿಕ ಒಪ್ಪಂದಗಳಿಗೆ ಸಂಸ್ಥೆ ಸಹಿ ಹಾಕಿದೆ. 2011-12 ಆರ್ಥಿಕ ವರ್ಷದಲ್ಲಿ ಒಟ್ಟಾರೆ 52 ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು ಎಂದು ಸಂಸ್ಥೆ ಪ್ರಕಟಿಸಿದೆ.

ನಿರೀಕ್ಷೆ ಮೀರಿ ಬೆಳೆದ HCL: ಪ್ರಸಕ್ತ ತ್ರೈಮಾಸಿಕದಲ್ಲಿ ಎಚ್ ಸಿಎಲ್ ಸಂಸ್ಥೆ ಒಟ್ಟಾರೆ 676 ಕೋಟಿ ರು ನಂತೆ ನಿವ್ವಳ ಲಾಭ ಪಡೆಯಬಹುದು ಎಂದು ಮಾರುಕಟ್ಟೆ ತಜ್ಞರು ನಿರೀಕ್ಷೆ ಹೊಂದಿದ್ದರು. ಆದರೆ, ನಿರೀಕ್ಷೆ ಮೀರಿ ಪ್ರಗತಿ ಸಾಧಿಸಿರುವ ಎಚ್ ಸಿಎಲ್ ಸಂಸ್ಥೆ 854.1 ಕೋಟಿ ರು.ನಂತೆ ಶೇ 67.3 ರಷ್ಟು ನಿವ್ವಳ ಲಾಭ ಗಳಿಸಿರುವುದು ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಂತಾಗಿದೆ.

Xerox ಕಾರ್ಪೊರೇಷನ್ ಹಾಗೂ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ Inc ನಂಥ ಗ್ರಾಹಕರನ್ನು ಹೊಂದಿರುವ ಎಚ್ ಸಿಎಲ್ ಗೆ ಇನ್ಫೋಸಿಸ್ ಸಂಸ್ಥೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 100 ಬಿಲಿಯನ್ ಡಾಲರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಇನ್ಫೋಸಿಸ್ ನ back office ಸೇವಾ ವಿಭಾಗದ ಆದಾಯ ಮುಖ್ಯವಾಗಿ ಅಮೆರಿಕ ಹಾಗೂ ಯುರೋಪ್ ಕ್ಲೈಂಟ್ ಗಳ ಮೇಲೆ ಅವಲಂಬಿತವಾಗಿದೆ.

ಜಾಗತಿಕವಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟ ಪರಿಣಾಮ ಹಾಗೂ ಹೆಚ್ಚಾದ ಪ್ರತಿಸ್ಪರ್ಧೆಯಿಂದ ಇನ್ಫೋಸಿಸ್ ತತ್ತರಿಸಿದೆ. ಇನ್ನೊಂದೆಡೆ ಆಕ್ಸೆಂಚರ್ ಕೂಡಾ ಗರಿ ಬಿಚ್ಚಿ ಮೇಲೆದ್ದಿದೆ. ಡಾಲರ್ ಮಾರಾಟ ಪ್ರಗತಿಯಲ್ಲಿ ತೀವ್ರ ಕುಸಿತ ಕಂಡ ಇನ್ಫೋಸಿಸ್ ದುಃಸ್ಥಿತಿ ಲಾಭ ನೇರವಾಗಿ ಎಚ್ ಸಿಎಲ್ ಕಂಪನಿ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+