ಉತ್ತರ ಪ್ರದೇಶ : ಡೂನ್ ಎಕ್ಸ್ ಪ್ರೆಸ್ ಪಲ್ಟಿ, 7 ಸಾವು

Doon Express Derails UP
ಉತ್ತರಪ್ರದೇಶ, ಮೇ.31: ಡೆಹ್ರಾಡೂನ್ ನಿಂದ ಹೌರಾಗೆ ತೆರಳುತ್ತಿದ್ದ ಡೂನ್ ಎಕ್ಸ್ ಪ್ರೆಸ್ ನ ಬೋಗಿಗಳು ಪಲ್ಟಿ ಹೊಡೆದಿದೆ. ಜಾನ್ ಪುರದ ಕರೋಡಿಯಾ ಗ್ರಾಮದ ಬಳಿ ಸಂಭವಿಸಿದ ಈ ದುರಂತದಲ್ಲಿ 7 ಜನರು ಸಾವನ್ನಪ್ಪಿದ್ದು, 50 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಸ್ಲೀಪರ್ ಕೋಚ್ ಗಳಾದ S6, S7, S8 ಹಾಗೂ SE ಹಳಿ ತಪ್ಪಿದ್ದು, S9 ಹಾಗೂ ಎರಡು ಸೆಕೆಂಡ್ ಕ್ಲಾಸ್ ಬೋಗಿಗಳು ಪಲ್ಟಿ ಹೊಡೆದಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದ. ಪರಿಹಾರ ಕಾರ್ಯ ಸಾಗಿದೆ ಎಂದು ರೈಲ್ವೇ CPRO ಅನಿಲ್ ಸಕ್ಸೇನಾ ಹೇಳಿದ್ದಾರೆ.

ಡೂನ್ ಎಕ್ಸ್ ಪ್ರೆಸ್ ಸಹಾಯವಾಣಿ ಇಲ್ಲಿದೆ:
ಲಖ್ನೋ: 0522-2234533
ಹೌರಾ: 033-26413660, 033-26402241, 033-26402242, 033-26402243
ಕೋಲ್ಕತ್ತಾ: 033-26413660, 26402241, 26402242, 26402243

ಮಮತಾ ಬ್ಯಾನರ್ಜಿ ಕಿಡಿ: ಮಾಜಿ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ಡೂನ್ ಎಕ್ಸ್ ಪ್ರೆಸ್ ಅಪಘಾತದ ಹಿಂದೆ ಯಾರದ್ದೋ ಕೈವಾಡ ಇದೆ. ಸಮಾಜ ಘಾತುಕ ಶಕ್ತಿಗಳ ಸಂಚಿನಿಂದ ಇದು ನಡೆದಿದೆ. ಆಕಸ್ಮಿಕವಾಗಿ ನಡೆದ ಅಪಘಾತವಲ್ಲ, ಪೂರ್ವಯೋಜಿತ ಘಟನೆ ಎಂಬರ್ಥದಲ್ಲಿ ಆರೋಪ ಹೊರೆಸಿದ್ದರು.

ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಎನ್ ಡಿಎ ಹಾಗೂ ಎಡಪಕ್ಷಗಳು ಭಾರತ್ ಬಂದ್ ನಡೆಸಿದ ದಿನವೇ ರೈಲು ಅಪಘಾತ ಆಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಈ ಘಟನೆಯ ಹಿಂದೆ ಯಾರ ಕೈವಾಡ ಇದೆ ಎಂದು ಸೂಕ್ತವಾಗಿ ತನಿಖೆ ಮಾಡಿ ತಿಳಿದುಕೊಳ್ಳಬೇಕಿದೆ ಎಂದು ಮಮತಾ ಆಗ್ರಹಿಸಿದ್ದರು.

2010ರ ಮೇ 14ರಂದು ಮಿಡ್ನಾಪುರ್ ಜಿಲ್ಲೆಯಲ್ಲಿ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ದುರಂತದ ಸಂದರ್ಭದಲ್ಲೂ ಹೀಗೆ ಆಯಿತು. ದುರಂತದಲ್ಲಿ ನೋವುಂಡವರಿಗೆ ಸಾಂತ್ವನ ಹೇಳುವುದು ಒಂದು ಕಡೆಯಾದರೆ, ದುರಂತಗಳು ಸಂಭವಿಸದಂತೆ ತಡೆಗಟ್ಟುವುದು ಕೂಡಾ ಸರ್ಕಾರದ ಕರ್ತವ್ಯವಾಗಿದೆ. ಜ್ಞಾನೇಶ್ವರಿ ಎಕ್ಸ್ ಪ್ರೆಸ್ ದುರಂತದಲ್ಲಿ 141 ಜನ ಸಾವನ್ನಪ್ಪಿದ್ದರು.

ಇದಕ್ಕೆ ಉತ್ತರಿಸಿದ ಕೇಂದ್ರ ರೈಲ್ವೆ ಖಾತೆ ಸಚಿವ ಮುಕುಲ್ ರಾಯ್, ಮಮತಾ ಬ್ಯಾನರ್ಜಿ ಅವರು ಯಾರ ಬಗ್ಗೆ ಹೇಳುತ್ತಿದ್ದಾರೋ ಗೊತ್ತಿಲ್ಲ ಅವರನ್ನೇ ಆ ಬಗ್ಗೆ ಪ್ರಶ್ನಿಸುವುದು ಉತ್ತಮ. ಅಪಘಾತದ ಬಗ್ಗೆ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಯಲಿದೆ ಎಂದಿದ್ದರು.

ರೈಲ್ವೇ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರು ಹಾಗೂ ಗಾಯಗೊಂಡವರಿಗೆ 1 ಲಕ್ಷ ರು ಪರಿಹಾರ ನೀಡಲಾಗಿದೆ. ಸಣ್ಣ ಪುಟ್ಟ ಗಾಯಗಳಾದವರಿಗೆ 50,000 ರು ನೀಡಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸಚಿವ ಮುಕುಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+