Free ರೋಮಿಂಗ್, ಎಲ್ಲರಿಗೂ ಬ್ರಾಡ್ ಬ್ಯಾಂಡ್

ಹೊಸ ದೂರಸಂಪರ್ಕ ನೀತಿ-2012 ಯನ್ನು ಪ್ರಕಟಿಸಿದ ಟೆಲಿಕಾಂ ಸಚಿವ ಕಪಿಲ್ ಸಿಬಲ್, ಹೊಸ ನೀತಿಗೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ ಎಂದು ಪ್ರಕಟಿಸಿದರು.
ಉಚಿತ ರೋಮಿಂಗ್: ದೇಶದ ಯಾವುದೇ ಭಾಗದಲ್ಲಿ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್ ಸಂಖ್ಯೆ ಬದಲಿಸುವ ಅಗತ್ಯ ಇರದ (ಎಂಎನ್‌ಪಿ) ಸೌಲಭ್ಯ ಒದಗಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ.
ದೇಶವ್ಯಾಪಿ 'ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಇದರಿಂದ ಎಸ್ ಟಿಡಿ ಕರೆಗಳ ಅಂತರ ಕಡಿಮೆಯಾಗಲಿದೆ. ಈ ನೀತಿ ಅಳವಡಿಕೆಗೆ ಕೆಲ ಕಾಲ ಬೇಕಾಗುತ್ತದೆ ಎಂದು ಸಚಿವ ಕಪಿಲ್ ಹೇಳಿದ್ದಾರೆ.
ಬ್ರಾಡ್‌ಬ್ಯಾಂಡ್ ಸೇವೆಗೆ ಬದ್ಧ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಪಡೆಯಬಹುದು. ಕನಿಷ್ಠ 2 Mbps ಡೌನ್ ಲೋಡ್ ಸ್ಪೀಡ್ ಇರುವ ಇಂಟರ್ನೆಟ್ ಜಾಲ ದೇಶದ ಮೂಲೆ ಮೂಲೆಗೂ ಹಬ್ಬಲಿದೆ. ಈ ನೀತಿ ಎಲ್ಲೆಡೆ ತಕ್ಷಣಕ್ಕೆ ಜಾರಿಗೆ ಬರಲಿದೆ. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದೆ ಎಂದರೆ 2mbps ಸ್ಪೀಡ್ ಇರಲೇಬೇಕು.
ಸಂಪರ್ಕ ಸಾಧನವಾಗಿರುವ ಮೊಬೈಲ್ ಅನ್ನು ಸಂವಹನ, ಗುರುತಿನ ದಾಖಲೆ, ಸಂಪೂರ್ಣ ಸುರಕ್ಷತೆಯ ಹಣಕಾಸು ಸೇವೆ, ಬಹುಭಾಷೆಗಳಲ್ಲಿ ಸೇವೆ ಮತ್ತಿತರ ವಹಿವಾಟು ನಡೆಸಲು ಸಾಧ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
2011 ಪ್ರಕಟಿಸಿದ ಎಲ್ಲಾ ಯೋಜನೆಗಳಿಗೆ ತಿದ್ದುಪಡಿ ಮಾಡಿ ಹೊಸ ದೂರಸಂಪರ್ಕ ನೀತಿ-2012 ರಚಿಸಿ ಅನುಮೋದನೆ ಪಡೆಯಲಾಗಿದೆ. ಯುಪಿಎ ಸರ್ಕಾರದ ಟೆಲಿಕಾಂ ನೀತಿ, ಯೋಜನೆಗಳ ಮುಖ್ಯಾಂಶ ಇಂತಿದೆ:
* ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ಸಾಂದ್ರತೆಯನ್ನು 2017ರೊಳಗೆ ಶೇ 39 ರಿಂದ 70ಕ್ಕೆ ಏರಿಸುವುದು ಹಾಗೂ
2020 ಹೊತ್ತಿಗೆ ಶೇ 100ರಷ್ಟು ದೂರ ಸಂಪರ್ಕ ಜಾಲವನ್ನು ಗ್ರಾಮೀಣ ಭಾಗದಲ್ಲಿ ಹೊಂದುವುದು.
* ಮೊಬೈಲ್ ಫೋನ್ ಗಳನ್ನು ಆರ್ಥಿಕ, ಸಮಾಜಿಕ ಸಬಲೀಕರಣಕ್ಕೆ ಬಳಸುವುದು.
* ಎಲ್ಲರಿಗೂ ಬ್ರಾಡ್ ಬ್ಯಾಂಡ್ 2 ಎಂಬಿಪಿಎಸ್ ಕನಿಷ್ಠ ಡೌನ್ಲೋಡ್ ಮಿತಿ
* ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಗುರುವಾಗಿಸುವುದು. ಸ್ಥಳೀಯ ಕಂಪನಿಗಳಿಗೆ ಉತ್ತೇಜನ
* ಒಂದೇ ತರಂಗಗುಚ್ಛದಲ್ಲಿದ್ದರೆ ಯಾವುದೇ ತಂತ್ರಜ್ಞಾನ, ಯಾವುದೇ ಸೇವೆ ಲಭ್ಯವಾಗುವಂತೆ ಮಾಡುವುದು.
* ಟೆಲಿಕಾಂ ಲೈಸನ್ಸ್, ಡೀಲಿಂಕಿಂಗ್ ಸ್ಪೆಕ್ಟಂ ಲೈಸನ್ಸ್, ಆನ್ ಲೈನ್ ಅರ್ಜಿ ಹಾಗೂ ನಿರ್ವಹಣೆ
* ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ
* Voice over Internet Protocol
* ಕ್ಲೌಡ್ ಕಂಪ್ಯೂಟಿಂಗ್, ಉನ್ನತ ತಂತ್ರಜ್ಞಾನ ಅಳವಡಿಕೆ, IPV6 ಜಾಲ ಬಳಕೆ.












Click it and Unblock the Notifications