ಚುನಾವಣೆಗೆ ಸಿದ್ಧರಾಗಿ, 6 ತಿಂಗಳು ಮಾತ್ರ ಇದೆ

BS Yeddyurappa
ಬೆಂಗಳೂರು, ಮೇ 30: ರಾಜ್ಯದ ರಾಜಕೀಯ ಸ್ಥಿತ್ಯಂತರ ಸ್ಥಿತಿಯಲ್ಲಿ ಏನು ಬೇಕಾದರೂ ಸಂಭವಿಸುವ ಸಾಧ್ಯತೆಯಿದೆ. ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಮುಖಾಮುಖಿಯಾದ ದಿನವೇ ಯಡಿಯೂರಪ್ಪ ಅವರು ಹೊಸ ಸ್ಫೋಟಕ ಸುದ್ದಿ ಹೊರ ಹಾಕಿದ್ದಾರೆ. ಮುಂದಿನ ಆರು ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ ಎಲ್ಲರೂ ಸಜ್ಜಾಗಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರೇಸ್ ಕೋರ್ಸ್ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿ ಯಡಿಯೂರಪ್ಪ ಹೇಳಿದ್ದರೆ ಹೋಗ್ಲಿ ಬಿಡಿ ಎನ್ನಹುದಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ(ಮೇ.30) ಬಿಜೆಪಿ ಸ್ಲಂ ಮೋರ್ಚಾದ ಕಾರ್ಯಕಾರಿ ಸಭೆಯಲ್ಲಿ ಈ ರೀತಿ ಹೇಳಿಕೆ ನೀಡಿ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.

ದಕ್ಷಿಣ ಭಾರತಲ್ಲಿ ಬಿಜೆಪಿ ಸರ್ಕಾರ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಪೂರೈಸಿದೆ. ಸರ್ಕಾರದ ಅವಧಿ ಇನ್ನೂ ಒಂದು ವರ್ಷ ಇದೆ. ಆದರೆ, ರಾಜಕೀಯ ಪರಿಸ್ಥಿತಿಯಲ್ಲಿ ಇನ್ನು ಆರು ತಿಂಗಳೊಳಗೆ ಚುನಾವಣೆ ಎದುರಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಚುನಾವಣೆಗೂ ಮುನ್ನ ಆರು ತಿಂಗಳ ತಯಾರಿ ಅಗತ್ಯವಿದೆ. ಹೀಗಾಗಿ ಇಂದಿನಿಂದಲೇ ಕಾರ್ಯಾರಂಭ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿ ಕೊಳಗೇರಿ ನಿವಾಸಿಗಳನ್ನು ಬಳಸಿಕೊಂಡು ಅಧಿಕಾರ ಪಡೆದು, ಜನರ ಕಲ್ಯಾಣವನ್ನು ಮರೆತಿದೆ.

60 ವರ್ಷದಲ್ಲಿ ಕಾಂಗ್ರೆಸ್ ಮಾಡದ ಸಾಧನೆಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ. ಸರ್ವರಿಗೂ ಸಮಬಾಳು, ಸಮಪಾಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಿದೆ ಎಂದು ಯಡಿಯೂರಪ್ಪ ಹೇಳಿದರು.

ದೇಶದಲ್ಲಿ 45 ಕೋಟಿ ನಗರವಾಸಿಗಳಿದ್ದಾರೆ. ಅವರಲ್ಲಿ ಶೇ 20 ರಷ್ಟು ಅಂದರೆ 10 ಕೋಟಿಗೂ ಅಧಿಕ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಬೇಸರದ ಸಂಗತಿ. ಇವರಿಗೆ ಭೂಮಿ ಹಕ್ಕು ನೀಡಿ ವಸತಿ ಕಲ್ಪಿಸುವುದು ನಮ್ಮ ಕರ್ತವ್ಯ. ಇದು ವಾಜಪೇಯಿ ಅವರ ಕನಸು ಕೂಡ ಆಗಿತ್ತು ಎಂದು ಯಡಿಯೂರಪ್ಪ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+