ಹಂಪಿ ಎಕ್ಸ್‌ಪ್ರೆಸ್ ರೈಲು ದುರಂತ : ಸಹಾಯವಾಣಿ

ಮೃತರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದು ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಐವರು ಸಾವಿಗೀಡಾಗಿದ್ದಾರೆ. ಘಟನೆಯ ಸ್ಥಳಕ್ಕೆ ಕೇಂದ್ರ ರೈಲ್ವೆ ಖಾತೆ ಸಚಿವ ಮುಕುಲ್ ರಾಯ್ ಅವರು ಧಾವಿಸಿದ್ದು, ಸತ್ತವರ ಕುಟುಂಬಕ್ಕೆ 5 ಲಕ್ಷ ರು., ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರು. ಮತ್ತು ಸಣ್ಣಪುಟ್ಟ ಗಾಯ ಆದವರಿಗೆ 50 ಸಾವಿರ ರು. ರೇಲ್ವೆ ಇಲಾಖೆ ಘೋಷಿಸಿದೆ.
ಈ ಘಟನೆಯ ತನಿಖೆ ನಡೆಸಬೇಕೆಂದು ಆದೇಶಿಸಲಾಗಿದೆ. ರೈಲ್ವೆ ಸುರಕ್ಷತೆ ಆಯುಕ್ತ (ದಕ್ಷಿಣ ಸರ್ಕಲ್) ಎಸ್.ಕೆ. ಮಿಟ್ಟಲ್ ಅವರು ತನಿಖೆ ನಡೆಸಲಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಸಹಾಯಕ್ಕಾಗಿ ಕರ್ನಾಟಕದಿಂದ ಕೂಡ ಒಂದು ತಂಡ ಕಳಿಸಲಾಗಿದೆ.
ಸಹಾಯವಾಣಿ :
ಬೆಂಗಳೂರು : 080 22371166, 22156553, 22156554
ಬಳ್ಳಾರಿ : 08392 277704
ಹುಬ್ಬಳ್ಳಿ : 0836-2345338, 2346141, 2289826
ಹೊಸಪೇಟೆ : 08394-221788
ಪೆನುಕೊಂಡ : 08552-20228, 08555-2220228, 097013 74090, 09713 74091
ರೈಲಿನ ಮುಂದಿನ ಮೂರು ಬೋಗಿಗಳು ಜಾಸ್ತಿ ಹಾನಿಗೀಡಾಗಿವೆ. ಒಂಗು ಬೋಗಿಗೆ ಬೆಂಕಿ ಕೂಡ ಹೊತ್ತಿಕೊಂಡಿತ್ತು. ಮಂಗಳವಾರ ನಸುಕಿನಲ್ಲಿ ಪ್ರಯಾಣಿಕರೆಲ್ಲರು ನಿದ್ರೆಯಲ್ಲಿದ್ದಾಗ ಅಪಘಾತ ಸಂಭವಿಸಿರುವುದು ಹೆಚ್ಚಿನ ಅನಾಹುತಕ್ಕೆ ಕಾರಣವಾಗಿದೆ. ಗಾಯಗೊಂಡವರನ್ನು ಅನಂತಪುರ, ಪೆನುಕೊಂಡ, ಹಿಂದೂಪುರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸತ್ತವರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.












Click it and Unblock the Notifications