ಹುಬ್ಬಳ್ಳಿ ಬೆಂಗಳೂರು ಹಂಪಿ ಎಕ್ಸ್‌ಪ್ರೆಸ್ ದುರಂತ, 16 ಸಾವು

ಪ್ಲಾಟ್‍ಫಾರಂ 1ರಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಹಂಪಿ ಎಕ್ಸ್‌ಪ್ರೆಸ್ ಹಿಂದಿನಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆ ಯಾವ ಮಟ್ಟದ್ದಿತ್ತೆಂದರೆ ಹಂಪಿ ಎಕ್ಸ್‌ಪ್ರೆಸ್‌ನ ಮುಂದಿನ 1 ಬೋಗಿಗಳು ಧಗಧಗನೆ ಉರಿದಿದೆ. ಮೂವರು ಸಜೀವವಾಗಿ ದಹನಗೊಂಡಿದ್ದಾರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. [ಸಾವಿನ ಸಂಖ್ಯೆ 16ಕ್ಕೇರಿಕೆ]
ಗಾಯಾಳುಗಳನ್ನು ಪೆನಕೊಂಡ, ಅನಂತಪುರ, ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಅನೇಕರು ರೈಲಿನಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ರೈಲು ಸಿಬ್ಬಂದಿಯ ನಿರ್ಲಕ್ಷ್ಯತನವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. 1ನೇ ಪ್ಲಾಟ್‌ಫಾರಂನಲ್ಲಿ ಗೂಡ್ಸ್ ರೈಲು ನಿಂತಿದ್ದು ಹಂಪಿ ಎಕ್ಸ್‌ಪ್ರೆಸ್ ರೈಲಿನ ಸಿಬ್ಬಂದಿಗೆ ತಿಳಿಸದಿರುವುದೇ ಈ ಘಟನೆಗೆ ಕಾರಣವಾಗಿದೆ. [ಸಹಾಯವಾಣಿ]
ಹಂಪಿ ಎಕ್ಸ್‌ಪ್ರೆಸ್‌ನ ಮುಂದಿನ ಮೂರು ಬೋಗಿಗಳು ಹಳಿತಪ್ಪಿವೆ. ರೈಲಿನಲ್ಲಿ ಸಿಲುಕಿಕೊಂಡ ಜನರನ್ನು ರಕ್ಷಿಸಲು ಗ್ಯಾಸ್ ಕಟ್ಟರ್‌ಗಳನ್ನು ತರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ದುರದೃಷ್ಟದ ಸಂಗತಿಯೆಂದರೆ, ಬಜ್ಪೆ ವಿಮಾನ ಅಪಘಾತ ಸಂಭವಿಸಿ ಮೇ 22ಕ್ಕೆ ಎರಡು ವರ್ಷಗಳು ಪೂರೈಸಿವೆ. 2010ರ ಮೇ 22ರಂದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿತ್ತು.












Click it and Unblock the Notifications