ರೈಲು ದುರಂತ : ಸತ್ತವರಲ್ಲಿ 15 ಮಂದಿ ಬಳ್ಳಾರಿಯವರು

ಈ ರೈಲು ದುರಂತದಲ್ಲಿ ಸತ್ತವರಲ್ಲಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕೆಂಚೇನಗುಡ್ಡ ಗ್ರಾಮದ ಒಂದೇ ಕುಟುಂಬದ ಐವರು ಸೇರಿದ್ದಾರೆ. ಇವರು ತೀವರ ಬಡ ಕುಟುಂಬದಿಂದ ಬಂದವರಾಗಿದ್ದು, ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಬರುತ್ತಿದ್ದರು. ಇವರನ್ನು ಗುರುತಿಸಿದ ಕುಷ್ಟಗಿ ತಾಲೂಕಿನ ಸ್ನೇಹಿತರೊಬ್ಬರು ಸತ್ತ ಸುದ್ದಿಯನ್ನು ಗ್ರಾಮದ ಸಂಬಂಧಿಕರಿಗೆ ತಿಳಿಸಿದ್ದಾರೆ.
ಸತ್ತವರ ಹೆಸರುಗಳು ಇಂತಿವೆ : ರುದ್ರ ನಾಯಕ್ (40), ಅವರ ಪತ್ನಿ ಸರೋಜ (35), ಮಕ್ಕಳಾದ ದೇವಿಬಾಯಿ (19), ಪಾವನಿ (15) ಮತ್ತು ಮುತ್ತಣ್ಣ (10). ಇವರಲ್ಲಿ ದೇವಿಬಾಯಿಯ ಮದುವೆ ಕುಷ್ಟಗಿ ತಾಲೂಕಿನ ಎಂಬಿ ತಾಂಡಾದ ಯುವಕನೊಂದಿಗೆ ನಿಶ್ಚಯವಾಗಿತ್ತು. ಮದುವೆಗೆ ಮುಂಚೆಯೇ ವಿಧಿ ಆಕೆಯನ್ನು ಬರಸೆಳೆದಿದೆ. [ಸಹಾಯವಾಣಿ]
ಜಿಲ್ಲೆಯ ನಾಡಗುರ್ತಿ ಗ್ರಾಮದ ಲಕ್ಷಮ್ಮ (35) ಮತ್ತು ಆಕೆಯ ಮಗ ಮಲ್ಲೇಶಪ್ಪ (15) ಕೂಡ ದುರಂತ ಸಾವಿಗೀಡಾಗಿದ್ದಾರೆ. ದುರಂತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಸತ್ತವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕೇಂದ್ರ ರೈಲು ಖಾತೆ ಸಹಾಯಕ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಕೂಡ ದೆಹಲಿಯಿಂದ ಅಪಘಾತ ನಡೆದ ಸ್ಥಳಕ್ಕೆ ಬರುತ್ತಿದ್ದಾರೆ.












Click it and Unblock the Notifications