ತಾಯಿ ಮಗಳು ಸಾವು, ಮೂರು ಮಕ್ಕಳು ಬಚಾವ್
ಯಾದಗಿರಿ,
ಮೇ 17 : ಕೌಟುಂಬಿಕ ಕಲಹದಿಂದ ಬೇಸತ್ತು ತನ್ನ ನಾಲ್ವರು ಹೆಣ್ಣುಮಕ್ಕಳೊಂದಿಗೆ ರೈಲಿಗೆ ಸಿಲುಕಿ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ತಾಯಿ ಮತ್ತು ಮೂರನೇ ಮಗಳು ಸಾವಿಗೀಡಾಗಿದ್ದರೆ, ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. id="toptextpromo">ಮೃತರನ್ನು
ಸೈದಾಪೂರ್ ಗ್ರಾಮದ ಸಾಬಮ್ಮ (35) ಮತ್ತು ಆಕೆಯ ಮಗಳು ಸರೋಜಾ (4) ಎಂದು ಗುರುತಿಸಲಾಗಿದೆ. ಯಾದಗಿರಿ ರೈಲ್ವೆ ನಿಲ್ದಾಣದ ಹತ್ತಿರ ಚಲಿಸುತ್ತಿರುವ ರೈಲ್ವೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 6 ತಿಂಗಳ ಕಂದಮ್ಮ ತನುಜಾ ರೈಲ್ವೆ ಹಳಿ ಮಧ್ಯೆ ಬಿದ್ದಿದ್ದರಿಂದ ಆಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪವಾಡಸದೃಶ ಪಾರಾಗಿದೆ. id='are-slot-1' class='oiad oi-axt oiadv'> id='top-searched-articles'>ರೈಲು
ಬರುತ್ತಿರುವಾಗ, ಮೊದಲು ನಾವು ಸಾಯುತ್ತೇವೆ ನಂತರ ನೀವು ಹಳಿಗೆ ತಲೆಯೊಡ್ಡಿ ಎಂಬ ತಾಯಿಯ ಮಾತನ್ನು ಸ್ವಲ್ಪ ತಿಳಿವಳಿಕೆ ಇರುವ ಭೀಮಮ್ಮ (6), ಬನ್ನಮ್ಮ (7) ನಿರಾಕರಿಸಿದ್ದರಿಂದ ಅವರಿಬ್ಬರು ಪಾರಾಗಿದ್ದಾರೆ. ತಾಯಿ ಮತ್ತು ಕೊನೆ ಮಗಳು ಸಾವಿಗೀಡಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಯಚೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.











Click it and Unblock the Notifications