ಯಡಿಯೂರಪ್ಪ ಮಗನ ಜೊತೆ ಡೇಟಿಂಗ್ ಮಾಡಿಲ್ಲ: ಹರಿಪ್ರಿಯಾ

ಬೆಂಗಳೂರು, ಮೇ.16: ಗಣಿಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೂ ಸಿಬಿಐ ದಾಳಿ ನಡೆಸಿದೆ. ಯಡಿಯೂರಪ್ಪ ಅವರ ಮಗನ ಗೆಳತಿ ನಟಿ ಹರಿಪ್ರಿಯಾ ಅವರ ಸದಾಶಿವ ನಗರದ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಖಾಸಗಿ ಮಾಧ್ಯಮಗಳ ವರದಿಯನ್ನು ನಟಿ ಹರಿಪ್ರಿಯಾ ಅಲ್ಲಗೆಳೆದಿದ್ದಾರೆ.

'ನಾನು ಯಡಿಯೂರಪ್ಪ ಅವರ ಮಗನ ಜೊತೆ ಡೇಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದೇ ಗೊತ್ತಿರಲಿಲ್ಲ. ನನಗೆ ಅವರ ಮಗ ವಿಜಯೇಂದ್ರ ಗೊತ್ತಿಲ್ಲ. ನನ್ನ ಮನೆ ಮೇಲೆ ಸಿಬಿಐ ದಾಳಿ ನಡೆದಿಲ್ಲ. ಇಷ್ಟಕ್ಕೂ ನನ್ನ ಮನೆ ಇರುವುದು ಯಶವಂತಪುರದಲ್ಲಿ, ಸದಾಶಿವನಗರದಲ್ಲಲ್ಲ. ಮಾಧ್ಯಮಗಳ ವರದಿಯಿಂದ ಶಾಕ್ ಆಗಿದೆ. ಊಹಾಪೋಹ ಸುದ್ದಿಗಳನ್ನು ನಂಬಬೇಡಿ' ಎಂದು ಮೋಹಕ ನಟಿ ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಹಾಗೂ ಹರಿಪ್ರಿಯಾ ಅವರಿಗೆ ಆತ್ಮೀಯ ಗೆಳೆತನವಿದೆ ಎಂದು ಖಾಸಗಿ ಕನ್ನಡ ಸುದ್ದಿ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಡಾಲರ್ಸ್ ಕಾಲೋನಿಯಲ್ಲಿ ಹರಿಪ್ರಿಯಾ ಅವರಿದ್ದ ಬಾಡಿಗೆ ಮನೆಯನ್ನೆ ಇಂದಿನ ವರದಿಯಲ್ಲೂ ತೋರಿಸಲಾಗಿತ್ತು.

ಆದರೆ, ಹರಿಪ್ರಿಯಾ ಮೇಲೆ ಈ ರೀತಿ ಗಾಸಿಪ್ ಇದೇ ಮೊದಲಲ್ಲ. 'ಮನಸುಗಳ ಮಾತು ಮಧುರ', 'ಕಳ್ಳರ ಸಂತೆ' ಚಿತ್ರ ಬಿಡುಗಡೆ ಸಮಯದಲ್ಲೂ ಈ ರೀತಿ ಗಾಳಿ ಸುದ್ದಿಗಳು ಹರಡಿತ್ತು. ಈಗ 'ಕಿಲಾಡಿ ಕಿಟ್ಟಿ' ಚಿತ್ರ ಈ ವಾರ ಬಿಡುಗಡೆಯಾಗಬೇಕಿದೆ. 'ಯಾರೋ ಬೇಕಂತಲೇ ನನ್ನ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ನನಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು ಎಂಬ ಆಸೆಗೆ ಪದೇ ಪದೇ ಕೊಡಲಿ ಪೆಟ್ಟು ನೀಡಲು ಕೆಲವರು ಕಾದು ಕೂತಿದ್ದಾರೆ' ಎಂದು ಹರಿಪ್ರಿಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+