ಕಸದಿಂದ ಕೋಟಿ, ಬಿಬಿಎಂಪಿ ಏನಾಯ್ತು ದುಡ್ಡು?

BBMP Solid Waste Management
ಬೆಂಗಳೂರು, ಮೇ.16: ಕಸದ ಮೇಲೆ ತೆರಿಗೆ ಹಾಕಿ ಕೋಟಿಗಟ್ಟಲೇ ಹಣ ಗಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಹಣವನ್ನು ಸದ್ವಿನಿಯೋಗ ಮಾಡಿಲ್ಲ ಎಂದು ಎನ್ ಜಿಒಗಳು ಮಾಹಿತಿ ಹೊರ ಹಾಕಿದೆ.

ಆಸ್ತಿ ತೆರಿಗೆ ಜೊತೆಗೆ ಘನ ತ್ಯಾಜ್ಯ ನಿರ್ವಹಣೆ ನೆಪದಲ್ಲಿ ಕಸದ ಮೇಲೂ (garbage cess) ತೆರಿಗೆ ವಿಧಿಸಿರುವುದು ಖಾಸಗಿ ಏಜೆನ್ಸಿಗಳಿಗೆ ಮುಳುವಾಗಿದೆ. 2011ರಿಂದ ಇಲ್ಲಿಯವರೆಗೂ 27 ಕೋಟಿ ರು ಗಳಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಕಸದಿಂದಲೇ 5 ಕೋಟಿ ಲಭ್ಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಬಿಎಂಪಿ ತೆರಿಗೆ ಸಂಗ್ರಹಿಸಲು ಆರಂಭಿಸಿದ ಮೇಲೆ ಖಾಸಗಿ ಏಜೆನ್ಸಿಗಳಿಗೆ ಘನ ತ್ಯಾಜ್ಯ ನಿರ್ವಹಣೆ ಕೆಲಸ ನೀಡುವುದನ್ನು ಅಪಾರ್ಟ್ಮೆಂಟ್ ಗಳು ನಿಲ್ಲಿಸಿದ್ದಾರೆ. ಆದರೆ ತೆರಿಗೆ ಮಾತ್ರ ಸಂಗ್ರಹಿಸುವ ಬಿಬಿಎಂಪಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ತಜ್ಞ ಎನ್ ಎಸ್ ರಮಾಕಾಂತ್ ಹೇಳಿದ್ದಾರೆ.

ನಿಯಮದ ಪ್ರಕಾರ ಕಸವನ್ನು ಸರಿಯಾಗಿ ಬೇರ್ಪಡಿಸದಿದ್ದರೆ, ಬಿಬಿಎಂಪಿ ಕಸವನ್ನು ಎತ್ತುವಂತಿಲ್ಲ. ತ್ಯಾಜ್ಯ ನಿರ್ವಹಣೆಗಾಗಿ ತೆರಿಗೆ ಸಂಗ್ರಹಿಸಿದ ಮೇಲೆ ಸರಿಯಾಗಿ ಕಾರ್ಯ ನಿರ್ವಹಿಸುವುದು ಮುಖ್ಯ ಎಂದು ಸಾಹಸ್ ಎಂಬ ಎನ್ ಜಿಒ ನ ಸ್ಥಾಪಕಿ ವಿಲ್ಮಾ ರೋಡ್ರಿಗ್ರೇಸ್ ಹೇಳಿದ್ದಾರೆ. ಅಪಾರ್ಟ್ಮೆಂಟ್ ಗಳಿಂದ ಸುಮಾರು 7 ಟನ್ ಗಳಷ್ಟು ಕಸವನ್ನು ಬೆಂಗಳೂರಿನ ಅಪಾರ್ಟ್ಮೆಂಟ್ ಗಳಿಂದ ಸಾಹಸ್ ಸಂಸ್ಥೆ ಸಂಗ್ರಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+