Get Updates
Get notified of breaking news, exclusive insights, and must-see stories!

ಮೇಲ್ಮನೆ ಸದಸ್ಯೆ ರೇಖಾ 'ಗೋವಾದಲ್ಲಿ CID 999'

bollywood-queen-rekha-rajya-sabha-oath
ನವದೆಹಲಿ, ಮೇ 15: 57 ವರ್ಷದ ಚಿರಯೌವನೆ ರೇಖಾ ರಾಜ್ಯಸಭಾ ಸದಸ್ಯೆಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರೇಖಾರ ಅತ್ಯುತ್ತಮ 10 ಚಿತ್ರಗಳ ಪೈಕಿ 'ದಟ್ಸ್ ಕನ್ನಡ' 2 ಚಿತ್ರಗಳನ್ನು ಆಯ್ಕೆ ಮಾಡಿದೆ. ಅವು ಯಾವುವೆಂದು ತಿಳಿದುಕೊಳ್ಳುವ ಮುನ್ನ...

ಭಾರತೀಯ ಸಂವಿಧಾನ 80ನೇ ಪರಿಚ್ಛೇದದ ಪ್ರಕಾರ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆ ಇವುಗಳಲ್ಲಿ ವಿಶೇಷ ಜ್ಞಾನ, ಕೌಶಲ್ಯ ಹಾಗೂ ಕೆಲಸ ಮಾಡಿದ ಅನುಭವಗಳ ಆಧಾರದ ಮೇಲೆ ಈ ನಾಮಕರಣ ಪ್ರಕ್ರಿಯೆ ನಡೆಯುವುದು ವಾಡಿಕೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಮೇಲ್ಮನೆಗೆ ನೇಮಕಗೊಂಡಿದ್ದು, ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

80ರ ದಶಕದಲ್ಲಿ ತಮ್ಮ ಅಮೋಘ ನಟನೆ ಹಾಗೂ ಮಾದಕ ಸೌಂದರ್ಯದಿಂದ ಚಿತ್ರರಸಿಕರಿಗೆ ಹುಚ್ಚುಹಿಡಿಸಿದ್ದ ರೇಖಾ, ಚೆನ್ನೈನಲ್ಲಿ 1954ರ ಅಕ್ಟೋಬರ್ 10ರಂದು (ಭಾನುರೇಖಾ) ಜನಿಸಿದರು. ಅವರ ತಂದೆ ಖ್ಯಾತ ನಟ ಜೆಮಿನಿ ಗಣೇಶನ್. ಅವರ ತಾಯಿ ಪುಷ್ಪವಲ್ಲಿ ಸಹ ತೆಲುಗು ಅಭಿನೇತ್ರಿ. ಆದರೆ ಇವರ ದಾಂಪತ್ಯ living together ಆಗಿತ್ತು, ಮದುವೆಯಾಗಿರಲಿಲ್ಲ.

1970ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರೇಖಾ ಬಾಲಿವುಡ್ ನಲ್ಲಿ 80ರ ದಶಕದಲ್ಲಿ ಉತ್ತುಂಗ ತಲುಪಿದರು. 1966ರಲ್ಲಿ ಬಾಲ ನಟಿಯಾಗಿ 'ರಂಗುಲ ರಾಟ್ನಂ' ತೆಲುಗು ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಆದರೆ ಅವರ ಬಾಳು ನಿಜಕ್ಕೂ 'ರಂಗುಲ ರಾಟ್ನಂ' ಆಗಿಯೇ ಇದೆ. ಕುತೂಹಲದ ಸಂಗತಿಯೆಂದರೆ ರೇಖಾ ಏಕೈಕ ಕನ್ನಡ ಚಿತ್ರದಲ್ಲಿ ನಟಿಸಿದ್ದರು. 'ಗೋವಾದಲ್ಲಿ CID 999' ಚಿತ್ರದಲ್ಲಿ ಅಭಿನಯಿಸಿದ್ದರು. ಮೇರು ನಟ ಡಾ. ರಾಜ್ ಕುಮಾರ್ ಅವರಿಗೆ ಹೀರೋಯಿನ್ ಆಗಿದ್ದರು.

ಗಾಸಿಪ್ ಕಾಲಂಗಳಲ್ಲಿ ರೇಖಾ ಅನೇಕ ಬಾರಿ ಮದುವೆಯಾಗಿದ್ದಾರೆ. ಇನ್ನು ಬೆಳ್ಳಿಪರದೆಯ ಮೇಲಂತೂ ಅನೇಕ ಹೀರೋಗಳ ಸಂಗದಲ್ಲಿದ್ದರು. ಜಿತೇಂದ್ರ, ವಿನೋದ್ ಮೆಹ್ತಾ, ಕಿರಣ್ ಕುಮಾರ್, ಅಮಿತಾಭ್ ಬಚ್ಚನ್ ಹೀಗೆ ಆ ಪಟ್ಟಿ ಸಾಗುತ್ತದೆ. ರೇಖಾ, 1990ರಲ್ಲಿ ದೆಹಲಿಯ ಉದ್ಯಮಿ ಮುಕೇಶ್ ಅಗರವಾಲ್ ಅವರನ್ನು ಮದುವೆಯಾಗಿದ್ದರು. ಆದರೆ ಮುಕೇಶ್ ಮದುವೆಯಾದ ಒಂದೇ ವರ್ಷದಲ್ಲಿ ಅಸುನೀಗಿದರು. 1991ರಲ್ಲಿ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು.

ರೇಖಾರ ಪ್ರಮುಖ 10 ಚಿತ್ರಗಳು:
ಖೂಬ್ ಸೂರತ್, ಘರ್, ಖೂನ್ ಭರಿ ಮಾಂಗ್, ಸಿಲ್ ಸಿಲಾ, ಉಮ್ರಾವ್ ಜಾನ್, ಮುಖದ್ದರ್ ಕಾ ಸಿಕಂದರ್, ಮುಝೆ ಇನ್ಸಾಫ್ ಚಾಹಿಯೆ, ಉತ್ಸವ್, ಬಸೇರಾ ಮತ್ತು ಇಜ್ಜತ್. ಇವುಗಳ ಪೈಕಿ ದಟ್ಸ್ ಕನ್ನಡ ಛಾಯ್ಸ್ ಸಿಲ್ ಸಿಲಾ ಮತ್ತು ಉತ್ಸವ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+