ಬ್ರಹ್ಮಪುತ್ರದಲ್ಲಿ ಚಂಡಮಾರುತ, ನೂರಾರು ಸಾವು
ಅಸ್ಸಾಂ,
ಮೇ.1: ಅಸ್ಸಾಂನ ಡುಬ್ರಿಯಲ್ಲಿ ಚಂಡಮಾರುತಕ್ಕೆ ಸಿಲುಕಿ ಭೀಕರ ದೋಣಿ ದುರಂತ ಸಂಭವಿಸಿದೆ.ಸುಮಾರು 329 ಕ್ಕೂ ಅಧಿಕ ಜನರಿದ್ದ ದೋಣಿ ಮುಳುಗಿದ್ದು 109ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ 200 ದಾಟುವ ಶಂಕೆ ವ್ಯಕ್ತವಾಗಿದೆ. id="toptextpromo">ರಕ್ಷಣಾ
ಕಾರ್ಯ ಪ್ರಗತಿಯಲ್ಲಿದ್ದು, ಇದುವರೆವಿಗೂ 49 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೂ ಸೇನೆ, ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>250
ಜನ ಹೋಗಬಹುದಾದ ಡಬ್ಬಲ್ ಡೆಕ್ಕರ್ ಬೋಟ್ 500ಕ್ಕೂ ಅಧಿಕ ಜನ ಪ್ರಯಾಣಿಸಿದ್ದರು ಎನ್ನಲಾಗಿದೆ. ಸರಿಯಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸಿಎಂ ತರುಣ್ ಗೊಗಾಯ್ ಅವರು ತನಿಖೆಗೆ ಆದೇಶಿಸಿದ್ದು, ಸಂತ್ರಸ್ತರಿಗೆ ಪ್ರಧಾನಿ ಮಂತ್ರಿ ಪರಿಹಾರ ನಿಧಿ ಮೂಲಕ ಕೂಡಾ ಹಣ ಒದಗಿಬಂದಿದೆ. ಪರಿಹಾರ ಕಾರ್ಯ ಮುಂದುವರೆದಿದೆ.











Click it and Unblock the Notifications