ಮಿದುಳಿಗೆ ಘಾಸಿ ಮಾಡಿದ ಕೆಎಫ್ಸಿಗೆ ಭಾರೀ ದಂಡ

ಕೆಎಫ್ಸಿ ಫಾಸ್ಟ್ ಫುಡ್ನಲ್ಲಿ ವಿಷಪೂರಿತ ಚಿಕನ್ ತಿಂದಿದ್ದರಿಂದ 7 ವರ್ಷದ ಹುಡುಗಿ ಮೋನಿಕಾ ಸಮಾನ್ಳ ಮಿದುಳಿಗೆ ಘಾಸಿಯಾಯಿತು. ಈ ಘಟನೆ ನಡೆದಿದ್ದು 2005ರಲ್ಲಿ. ಕೆಎಫ್ಸಿ ವಿರುದ್ಧ ದಾಖಲಾದ ಪ್ರಕರಣ ಇತ್ಯರ್ಥವಾಗಿ ನ್ಯೂ ಸೌತ್ ವೇಲ್ಸ್ ನ್ಯಾಯಾಧೀಶರು, ಮೋನಿಕಾ ಕುಟುಂಬದವರಿಗೆ ಕೆಎಫ್ಸಿ 8.3 ಮಿಲಿಯನ್ ಡಾಲರ್ ದಂಡ ನೀಡಬೇಕೆಂದು ಶುಕ್ರವಾರ ಆದೇಶ ಹೊರಡಿಸಿದೆ.
ಕೆಎಫ್ಸಿ ಫಾಸ್ಟ್ ಫುಡ್ನಲ್ಲಿ ಚಿಕನ್ ತಿಂದಿದ್ದರಿಂದಲೇ ಮಗುವಿನ ಮಿದುಳು ಹಾಳಾಗಿದೆ ಎಂದು ನ್ಯಾಯಾಧೀಶ ಸ್ಟೀಫನ್ ರಾಥ್ಮನ್ ತೀರ್ಪು ನೀಡಿದ್ದಾರೆ. ಪ್ರಕರಣದ ಖರ್ಚು ವೆಚ್ಚ ಮತ್ತು ಪರಿಹಾರ ಸೇರಿಸಿ 8.3 ಮಿಲಿಯನ್ ಡಾಲರ್ ಹಣ ನೀಡಬೇಕೆಂದು ಏ.27ರಂದು ಆದೇಶ ಹೊರಡಿಸಿದ್ದಾರೆ.
ಈ ತೀರ್ಪಿನಿಂದ ತುಂಬಾ ನಿರಾಳವಾಗಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಮೋನಿಕಾ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಕೋರ್ಟ್ ತೀರ್ಪನ್ನು ಒಪ್ಪಲು ಕೆಎಫ್ಸಿ ತಯಾರಿಲ್ಲ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೆಎಫ್ಸಿ ಹೇಳಿದೆ.
1930ರಲ್ಲಿ ಸ್ಥಾಪಿತವಾದ ಕೆಎಫ್ಸಿ ವಿಶ್ವದಾದ್ಯಂತ 80 ರಾಷ್ಟ್ರಗಳಲ್ಲಿ 13 ಸಾವಿರ ಮಳಿಗೆಗಳನ್ನು ಹೊಂದಿದೆ. ಮ್ಯಾಕ್ಡೊನಾಲ್ಡ್ ರೀತಿಯಲ್ಲಿ ಕೆಎಫ್ಸಿ ಕೂಡ ಮಾಂಸಾಹಾರಿ ತಿನಿಸುಗಳ ಜೊತೆಗೆ ಸಸ್ಯಾಹಾರಿ ತಿನಿಸುಗಳನ್ನು ಕೂಡ ಗ್ರಾಹಕರಿಗೆ ಒದಗಿಸುತ್ತದೆ. (ಏಜೆನ್ಸೀಸ್)
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications