ವಿದೇಶದಿಂದ ವಾಪಸಾಗಲು ಸಚಿವಗೆ ಸಿಎಂ ತಾಕೀತು

'ವಿದೇಶಕ್ಕೆ ತೆರಳಿರುವ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ರಾಜ್ಯದಲ್ಲಿ ಬರ ಇರುವ ಕಾರಣದಿಂದ ವಾಪಸ್ ಬರಲು ಸೂಚನೆ ನೀಡಿದ್ದೇನೆ' ಎಂದು ಡಿವಿಎಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ, ನಾಲ್ಕು ದಿನಗಳ ಹಿಂದೆಯೇ (ಶನಿವಾರ ರಾತ್ರಿ) ಸಚಿವರು ಕುಟುಂಬ ಸಮೇತ ಇಟಲಿ, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಇನ್ನು ಮೂರು ದಿನಗಳಲ್ಲಿ ಅವರ ಪ್ರವಾಸವೇ ಪೂರ್ಣವಾಗಲಿದೆ. ಬುಕ್ಕಿಂಗ್ ಮಾಡಿಸಿರುವ ವಿಮಾನ ಟಿಕೆಟ್ ಗಳನ್ನು ರದ್ದುಪಡಿಸಿ, ಹೊಸದಾಗಿ ಟಿಕೆಟ್ ಲಭ್ಯತೆ ಆಧಾರದ ಮೇಲೆ ಪ್ರವಾಸವನ್ನು ಮೊಟಕುಗೊಳಿಸಿ ನಾರಾಯಣಸ್ವಾಮಿ ಅವರು ತಕ್ಷಣ ನಗರಕ್ಕೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾರಾಯಣಸ್ವಾಮಿ ಉಸ್ತುವಾರಿ ಸಚಿವರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಜಿಲ್ಲೆ ಈ ಬಾರಿಯೂ ಭೀಕರ ಬರದಿಂದ ಬಳಲುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಂಥ ಸಮಯದಲ್ಲಿ ಸಚಿವರು ಖುದ್ದಾಗಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಜನತೆ ಆಶಿಸಿದ್ದಾರೆ.












Click it and Unblock the Notifications