ಸಚಿವ ಸಂಸಾರ ಸಮೇತ ಇಟಲಿಗೆ: ಸಿಎಂ ಗರಂ

minister-narayanaswamy-foreign-trip-cm-displeasure
ಬೆಂಗಳೂರು, ಏ. 24: ರಾಜ್ಯದ ಜನತೆ ಬರದಿಂದ ತತ್ತರಿಸುತ್ತಿರುವಾಗ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಅವರು ಕುಟುಂಬ ಸಮೇತ ಶನಿವಾರ ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಈ ಬಗ್ಗೆ ಬೆಳಗಾವಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು ಸಚಿವರ ಹೊಣೆಗೇಡಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ತಮ್ಮ ವಿದೇಶ ಪ್ರವಾಸಗಳಿಗೆ ಬ್ರೆಕ್‌ ಹಾಕಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಹೀಗಿರುವಾಗ ಸಮಾಜ ಕಲ್ಯಾಣ ಸಚಿವರು ವಿದೇಶ ಪ್ರವಾಸಕ್ಕೆ ಹೋಗಿರುವದು ಸರಿಯಲ್ಲ. ಈ ನಿಟ್ಟಿನಲ್ಲಿ ಸಚಿವರ ವಿದೇಶ ಪ್ರವಾಸದ ಬಗ್ಗೆ ವಿಚಾರಿಸುವುದಾಗಿ ಸದಾನಂದ ಗೌಡರು ಹೇಳಿದರು.

ಮೊನ್ನೆ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಸದಾನಂದ ಗೌಡರು ಸಚಿವರನ್ನು ಮನದುಂಬಿ ಹೊಗಳಿದ್ದರು. 'ಸಂಪುಟದ ಅತ್ಯುತ್ತಮ ಸಚಿವ' ಎಂಬ ಬಿರುದನ್ನೂ ದಯಪಾಲಿಸಿದ್ದರು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ನಾರಾಯಣಸ್ವಾಮಿ ತಮ್ಮ ಕರ್ತವ್ಯ ನಿಷ್ಠೆ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.

ಇನ್ನು, ಬರದ ತಾಂಡವವಾಡುತ್ತಿರುವಾಗ ವಿದೇಶ ಪ್ರವಾಸ ಒಳಿತಲ್ಲ ಎಂದು ಖುದ್ದು ಸದಾನಂದಗೌಡರೇ ತಮ್ಮ ಪೂರ್ವನಿಗದಿತ, ಅಧಿಕೃತ ಪ್ರವಾಸವನ್ನು ರದ್ದುಗೊಳಿಸಿ, ಬರಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡಿದ್ದರು.

ನಾರಾಯಣಸ್ವಾಮಿ ಉಸ್ತುವಾರಿ ಸಚಿವರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಜಿಲ್ಲೆ ಈ ಬಾರಿಯೂ ಭೀಕರ ಬರದಿಂದ ಬಳಲುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇಂಥ ಸಮಯದಲ್ಲಿ ಸಚಿವರು ಖುದ್ದಾಗಿ ಪರಿಸ್ಥಿತಿ ನಿಭಾಯಿಸಬೇಕಿದೆ. ಆದರೆ ನಾರಾಯಣಸ್ವಾಮಿಗೆ ವಿದೇಶ ಆಪ್ಯಾಯಮಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+