ಜೈಲರ್ ಲಕ್ಷ್ಮಿನಾರಾಯಣ ಸಸ್ಪೆಂಡ್: ಸರ್ಕಾರ

ಡಿ.2011ರಲ್ಲಿ ಜೈಲ್ ಸೂಪರಿಂಟೆಂಡ್ ಟಿಎಚ್ ಲಕ್ಷ್ಮಿನಾರಾಯಣ ಹಾಗೂ ಅವರ ಸಹಾಯಕಿ ಡಾ. ಅನಿತಾ ಅವರು ಮಸೂದ್ ನನ್ನು ಅಕ್ರಮವಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಕರಿಸಿ, ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಎ ಆರ್ ಅಶೋಕ್ ಕುಮಾರ್ ಅಡಿಗ ಅವರು ಆರೋಪಿಸಿದ್ದಾರೆ.
ಮುಂಬೈನ ಸೈಯದ್ ಮಹಮ್ಮದ್ ಜಾಮದಾರ್ ಎಂಭುವರ ಮಗ ಎಸ್ ಎಂ ಮಸೂದ್ ಡಿ.27, 2011 ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದ ಪ್ರಕರಣದ ಬಗ್ಗೆ ಐಜಿಪಿ(ಬಂದೀಖಾನೆ)ಎಸ್ ರವಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ವರದಿ ಪ್ರಕಾರ ಲಕ್ಷ್ಮಿನಾರಾಯಣ ಹಾಗೂ ಸಹಾಯಕ ಸೂಪರಿಂಟೆಂಡ್ ಡಾ ಅನಿತಾ ಅವರು ವಿಚಾರಾಧೀನ ಖೈದಿಯಾಗಿದ್ದ ಮಸೂದ್ ನನ್ನು ಬಿಡುಗಡೆ ಮಾಡುವಾಗ ಕೋರ್ಟಿನ ಅನುಮತಿ ಪತ್ರವಾಗಲಿ, ಬಂದೀಖಾನೆ ಸಚಿವಾಲಯದ ಪತ್ರವಾಗಲಿ ಆಧಾರವಾಗಿಟ್ಟುಕೊಂಡಿರಲಿಲ್ಲ. [ಇದನ್ನು ಓದಿ: ಯಡ್ಡಿ ಔಟ್, ಜೈಲರ್ ಬ್ಯಾಕ್ ಟು ಪರಪ್ಪನ ಅಗ್ರಹಾರ]
ವಕೀಲನ ಪತ್ರ ಬಿಡುಗಡೆ ಮಾಡಿತು: ಖೈದಿ ನಂ 5782 ಮಸೂದ್ ನನ್ನು ಬಿಡುಗಡೆ ಮಾಡಲು ಕೋರ್ಟ್ ಜಾಮೀನು ಪತ್ರ ಕಾರಣವಲ್ಲ. ಚೆನ್ನೈನ ವಕೀಲ ಎಫ್ ಅರೀಫ್ ನವಾಜ್ ಅವರು ಬರೆದ ಪತ್ರ ಕಾರಣ ಎಂದು ಅಡಿಗ ಆರೋಪಿಸಿದ್ದಾರೆ.
ಮುಂಬೈ, ದೆಹಲಿ, ಜೈಪುರದಲ್ಲಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೂದ್ ಬೇಕಾಗಿದ್ದಾನೆ. COFEPOSA ಕಾಯಿದೆ ಅಡಿ ಪ್ರಕರಣ, 50ಕ್ಕೂ ಅಧಿಕ ಚೆಕ್ ಬೌನ್ಸ್ ಪ್ರಕರಣ, ವಂಚನೆ ಪ್ರಕರಣಗಳು ಮಸೂದ್ ಮೇಲಿದೆ.
ಚೆನ್ನೈ ವಕೀಲ ಆರೀಫ್ ಸಲ್ಲಿಸಿದ ಪತ್ರದ ಜೊತೆ ಯಾವುದೇ ಜಾಮೀನು ಪತ್ರ ಇರಲಿಲ್ಲ. ಮಸೂದ್ ಬಿಡುಗಡೆ ನಂತರ ಪರಪ್ಪನ ಅಗ್ರಹಾರ ಜೈಲಿಗೆ ದೇಶದ ವಿವಿಧ ಕೋರ್ಟ್ ಗಳಿಂದ 8ಕ್ಕೂ ಅಧಿಕ ಸಮನ್ಸ್ ಬಂದಿದೆ.












Click it and Unblock the Notifications