ರೇಣುಕಾಚಾರ್ಯಗೆ ಕ್ಲೀನ್‌ಚಿಟ್ ಇಲ್ಲ: ನ್ಯಾ ಸುಧೀಂದ್ರ

ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ ಎನ್ ಕೆ ಸುಧೀಂದ್ರ ರಾವ್ ಅವರು ಅಬಕಾರಿ ಇಲಾಖೆಯ ಉಪ ಆಯುಕ್ತ, ದೂರುದಾರ ಮೋಹನ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.
ಮಾರ್ಚ್ 21ರಂದು ಬೆಂಗಳೂರಿನ ಜೆಸಿ ನಗರದಲ್ಲಿರುವ ಮೋಹನ್ ಕುಮಾರ್ ಕಚೇರಿಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ 4.5 ಲೀಟರ್ ವಿದೇಶಿ ಮದ್ಯ ಸೇರಿದಂತೆ 24 ಲೀಟರ್‌ನಷ್ಟು ಅಕ್ರಮ ಮದ್ಯ ಹಾಗೂ ನಗದು ಪತ್ತೆಯಾಗಿತ್ತು.
ಈ ಬಗ್ಗೆ ಲೋಕಾಯುಕ್ತ ನ್ಯಾಯಾಲಯ ಮೋಹನ್ ಕುಮಾರ್‌ರನ್ನು ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಮದ್ಯವನ್ನು ಅಬಕಾರಿ ಸಚಿವ ರೇಣುಕಾಚಾರ್ಯ ಸೂಚನೆ ಮೇರೆಗೆ ಸಂಗ್ರಹಿಸಿಡಲಾಗಿತ್ತು. ಅದನ್ನು ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗರಿಗೆ ನೀಡುವುದಕ್ಕಾಗಿಯೇ ಸಂಗ್ರಹಿಸಡಲಾಗಿತ್ತು ಎಂದು ಮೋಹನ್ ಕುಮಾರ್ ಅವರು ನ್ಯಾ. ಎನ್.ಕೆ. ಸುಧೀಂದ್ರ ರಾವ್ ಮುಂದೆ ಅವರ ನಿವಾಸದಲ್ಲಿ ಹಾಜರುಪಡಿಸಿದಾಗ ಹೇಳಿಕೆ ನೀಡಿದ್ದರು.
ದಾಳಿ ವೇಳೆ, 25 ಸಾವಿರ ನಗದು ಮತ್ತು ವಿದೇಶಿ ಬ್ರ್ಯಾಂಡ್‌ಗಳ ಮದ್ಯದ ಬಾಟಲಿ ಸೇರಿದಂತೆ 20ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ನ್ಯಾಯಾಲಯ ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಲೋಕಾಯುಕ್ತ ಕೊರ್ಟ್‌ಗೆ ಮಾರ್ಚ್ 31ರಂದು ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿ, ಸಚಿವರು ಮೋಹನ್ ಕುಮಾರ್‌ಗೆ ಎರಡು ಬಾರಿ ಕರೆ ಮಾಡಿ ಬಜೆಟ್ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ಮಧ್ಯ ಸರಬರಾಜು ಮಾಡು ಎಂದೇನೂ ಹೇಳಿಲ್ಲವೆಂದು ಕೋರ್ಟಿಗೆ ತಿಳಿಸಿದ್ದರು. ಇದರೊಂದಿಗೆ ಪ್ರಕರಣದಲ್ಲಿ ರೇಣುಕಾಚಾರ್ಯ ಆರೋಪ ಮುಕ್ತರಾಗಿದ್ದರು. ಆದರೆ ಈಗ ಮತ್ತೆ ...












Click it and Unblock the Notifications