ಸಂಬಳ ನೀಡದ್ದಕ್ಕಾಗಿ ದಿ ವೀಕ್ ಮೇಲೆ ಸ್ಟ್ರಾಂಗ್ ದಾಳಿ

ಸಂಬಳ ಏರಿಸುವ ಮಾತು ಅತ್ತಾಗಿರಲಿ, ಸರಿಯಾಗಿ ಸಂಬಳ ಸಿಕ್ಕರೆ ಸಾಕು ಎಂಬ ದುಗುಡವೂ ಅನೇಕ ಕಂಪನಿಗಳ ನೌಕರರಲ್ಲಿ ಮನೆಮಾಡಿರುತ್ತವೆ. ಸಂಬಳವನ್ನೂ ಕೊಡದೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿದ್ದಕ್ಕಾಗಿ ಸಂಸ್ಥೆಯೊಂದರ ಮೇಲೆ ದಾಳಿ ಮಾಡಿ ಗೂಂಡಾಗಿರಿ ನಡೆಸಿದ ಘಟನೆ ನೆನಪಿದೆಯಾ?
ಇಂಥದೊಂದು ಘಟನೆ ಮುಂಬೈನ ದಿ ವೀಕ್ (ಜರ್ನಲಿಸಂ ವಿತ್ ಹ್ಯೂಮನ್ ಟಚ್) ಪತ್ರಿಕೆಯ ಕಚೇರಿಯಲ್ಲಿ ಜರುಗಿದೆ. ಓರ್ವನಿಗೆ ಪಿಂಕ್ ಸ್ಲಿಪ್ ನೀಡಿ, ಕೆಲ ನೌಕರರಿಗೆ ಸಂಬಳವನ್ನು ಕೊಡದಿದ್ದಕ್ಕೆ ಪ್ರತಿಯಾಗಿ ಪತ್ರಿಕಾ ಕಚೇರಿಯನ್ನು ಧ್ವಂಸ ಮಾಡಿದ ಘಟನೆ ಮುಂಬೈನಲ್ಲಿ ಗುರುವಾರ, ಏ.19ರಂದು ನಡೆದಿದೆ.
ಶಿವ ಸೇನೆ ಬೆಂಬಲಿತ ಭಾರತೀಯ ಕಾಮಗಾರ್ ಸೇನೆಯ ಕಾರ್ಯಕರ್ತರು ದಿ ವೀಕ್ ಸಂಸ್ಥೆಯ ಮಾರ್ಕೆಂಟಿಂಗ್ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಕೆಲ ನೌಕರರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ದಾಳಿಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿನೀತ್ ಅಗರವಾಲ್ ಅವರು ಹೇಳಿದ್ದಾರೆ.












Click it and Unblock the Notifications