ಮೆಕ್ಸಿಕೋದಲ್ಲಿಯೂ 6.5 ಪ್ರಮಾಣದ ಪ್ರಬಲ ಭೂಕಂಪ

ಈ ಭೂಕಂಪ ಸಂಭವಿಸಿ ಕೆಲವೇ ಗಂಟೆಗಳಲ್ಲಿ ಮೆಕ್ಸಿಕೋದ ಸೋನೋರಾ ಪ್ರದೇಶದಿಂದ 93 ಮೈಲು ದೂರದಲ್ಲಿ 7.1 ಮ್ಯಾಗ್ನಿಟ್ಯೂಡ್ ಇರುವ ಮತ್ತೊಂದು ಪ್ರಬಲ ಭೂಕಂಪ ಮೆಕ್ಸಿಕೋದಲ್ಲಿ ಸಂಭವಿಸಿದೆ ಎಂಬ ವರದಿಗಳೂ ಬರುತ್ತಿವೆ. ಜನನಿಬಿಡ ಪ್ರದೇಶ ಮತ್ತು ಎತ್ತರದ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸುವ ಕಾರ್ಯ ತ್ವರಿತವಾಗಿ ಸಾಗುತ್ತಿದೆ. ಇಲ್ಲಿಯವರೆಗೆ, ಯಾವುದೇ ಸಾವುನೋವು ಆದ ವರದಿಗಳು ಬಂದಿಲ್ಲ.
ಈ ಭೂಕಂಪಗಳು ಭುವಿಯ 65 ಕಿ.ಮೀ. ಆಳದಲ್ಲಿ ಉಂಟಾಗಿದ್ದರಿಂದ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಭೂಮಿಯ ಮೇಲ್ಮೈ ತಲುಪುವ ಹೊತ್ತಿಗೆ ಕಂಪನದ ಪ್ರಭಾವ ತಗ್ಗಿರುತ್ತದೆ ಎಂದು ಅಮೆರಿಕಾದ ಭೌಗೋಳಿಕ ಸರ್ವೇಕ್ಷಣ ಇಲಾಖೆ ತಿಳಿಸಿದೆ. ಮೂರು ವಾರಗಳ ಹಿಂದೆ 7.4 ಪ್ರಮಾಣದ ಪ್ರಬಲ ಭೂಕಂಪ ಮೆಕ್ಸಿಕೋದಲ್ಲಿ ಸಂಭವಿಸಿತ್ತು.
ಇದೇ ಸಮಯದಲ್ಲಿ ಕ್ಯಾಲಿಫೋರ್ನಿಯಾ, ನೇವಡಾ ಪ್ರಾಂತ್ಯಗಳಲ್ಲಿಯೂ ಲಘು ಭೂಕಂಪಗಳು ಸಂಭವಿಸಿವೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 1.4 ಪ್ರಮಾಣದ ಮತ್ತು ವಾಯವ್ಯ ಅಮೆರಿಕಾದ ನೇವಡಾದಲ್ಲಿ 1.5 ಪ್ರಮಾಣದ ಲಘು ಭೂಕಂಪಗಳು ಸಂಭವಿಸಿದೆ.











Click it and Unblock the Notifications