ಹೆಲಿಕಾಪ್ಟರ್ ಹಠಾತ್ ಭೂಸ್ಪರ್ಶ, ಪೈಲಟ್‌ಗಳಿಬ್ಬರು ಪಾರು
ಬೆಂಗಳೂರು,
ಏ. 12 : ಎಚ್ಎಎಲ್‌ಗೆ ಸೇರಿದ ತರಬೇತಿಯಲ್ಲಿದ್ದ ಸೇನಾ ಹೆಲಿಕಾಪ್ಟರೊಂದು ತಾಂತ್ರಿಕ ದೋಷದಿಂದಾಗಿ ಅಪಾರ್ಟ್‌ಮೆಂಟ್ ಮೇಲೆ ಹಠಾತ್ತಾಗಿ ಇಳಿದ ಘಟನೆ ಬೈಯಪ್ಪನಹಳ್ಳಿಯಲ್ಲಿ ಗುರುವಾರ ನಡೆದಿದೆ. id="toptextpromo">ಧ್ರುವ
ಹೆಲಿಕಾಪ್ಟರ್ ಇಂಧನ ಸೋರಿಕೆಯಿಂದಾಗಿ ಜಿಎಂ ಪಾಳ್ಯದಲ್ಲಿರುವ ಮೈತ್ರಿ ಅಪಾರ್ಟ್‌ಮೆಂಟ್‌ನ ಟೆರೇಸ್ ಲ್ಯಾಂಡ್ ಆಗಿದೆ. ಹೆಲಿಕಾಪ್ಟರಲ್ಲಿ ಇದ್ದ ತರಬೇತುದಾರ ರೋಡ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ದಿಗ್ವಿಜಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು. id='are-slot-1' class='oiad oi-axt oiadv'> id='top-searched-articles'>ಆದರೆ,
ನಿಯಂತ್ರಣ ತಪ್ಪಿ ದಿಢೀರನೆ ಹೆಲಿಕಾಪ್ಟರ್ ಗುದ್ದಿದ್ದರಿಂದ ಎಂಜಿನ್ನಿಗೆ ಹಾನಿಯುಂಟಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೈಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಟೆರೇಸ್ ಮೇಲೆ ಭಾರೀ ಶಬ್ದ ಬಂದಿದ್ದರಿಂದ ಅಪಾರ್ಟ್‌ಮೆಂಟ್‌ನಲ್ಲಿದ್ದ ನಾಗರಿಕರು ಗಾಬರಿಯಿಂದ ಮೇಲೆ ಓಡಿ ಹೋಗಿದ್ದಾರೆ. ಆಗ ಹೆಲಿಕಾಪ್ಟರ್ ಇಳಿದಿರುವುದು ಕಂಡುಬಂದಿದೆ.











Click it and Unblock the Notifications