ಸದಾನಂದ ಗೌಡರು ಜಿಮ್ ಗೆ ಹೋಗೊಲ್ವಂತೆ

drought-dvs-cancels-gim-foreign-trip
ಬೆಂಗಳೂರು, ಏ.12: 'ನಾನೇನೂ ಮೋಜು-ಮಜ ಮಾಡೊಕ್ಕೆ ವಿದೇಶಕ್ಕೆ ಹೋಗ್ತಿಲ್ಲ. ರಾಜ್ಯಕ್ಕೆ ಅಗತ್ಯವಾಗಿ ಬಂಡವಾಳ ಬೇಕಾಗಿದೆ' ಎಂದು ಹಠ ಹಿಡಿದಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ವಿದೇಶ ಪ್ರವಾಸವನ್ನು ರದ್ದುಪಡಿಸಿದ್ದಾರೆ.

ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಮುಖ್ಯಮಂತ್ರಿ ಡಿವಿಎಸ್, 'ಜಿಮ್ ಗೆ ಹೋಗೊಲ್ಲ. ಬದಲಿಗೆ ಬರ ಪ್ರದೇಶಗಳತ್ತ ಹೆಜ್ಜೆ ಹಾಕುವೆ' ಎಂದು ಸ್ಪಷ್ಟಪಡಿಸಿದರು. ಇದೇನು ಭೂಕಂಪದ ಎಫೆಕ್ಟೋ, ಮಾಜಿ ಸಿಎಂಗಳ ಎಫೆಕ್ಟೋ ಅಥವಾ ನಿಜಕ್ಕೂ ಬರಗೆಟ್ಟ ಕಾಳಜಿಯೋ ಅಂತೂ ಸದಾನಂದರು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ.

ರಾಜ್ಯ ಬರದ ನೆರಳಲ್ಲಿರುವಾಗ ಜನ-ಜಾನುವಾರುಗಳ ನೆರವಿಗೆ ಧಾವಿಸದೆ ನಿಂತನಿಲುವಿನಲ್ಲೇ ವಿದೇಶಕ್ಕೆ ತೆರಳುವುದರ ಔಚಿತ್ಯವೇನು ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಸಿಎಂ ಸಾಹೇಬರು ವಿದೇಶ ಪ್ರವಾಸ ಕ್ಯಾನ್ಸಲ್ ಮಾಡಿ, ಶಯಬ್ಬಾಸ್ ಎನಿಸಿಕೊಂಡಿದ್ದಾರೆ.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಅಧಿಕಾರಿಗಳ ದಂಡಿನೊಂದಿಗೆ (GIM) ಇದೇ 15 ರ ರಾತ್ರಿ ಬೆಂಗಳೂರಿನಿಂದ ಹೊರಡಬೇಕಿತ್ತು. ಸಿಂಗಾಪುರ ಮತ್ತು ಜಪಾನ್ ಸುತ್ತಾಡಿ, ಅಲ್ಲಿನ ಬಂಡವಾಳಶಾಹಿಗಳನ್ನು ಭೇಟಿ ಮಾಡಿ ಏ. 21ಕ್ಕೆ ವಾಪಸಾಗುವ ಕಾರ್ಯಕ್ರಮವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+