ಪುತ್ತೂರಿನಿಂದ ಬೆಂಗಳೂರಿಗೆ ಸ್ಲೀಪರ್ ಕೋಚ್ ಬಸ್

Puttur Sleeper coach bus
ಪುತ್ತೂರು, ಏ.10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪುತ್ತೂರು ವಿಭಾಗದ ಪುತ್ತೂರು ಘಟಕದ ವತಿಯಿಂದ ಪುತ್ತೂರು-ಬೆಂಗಳೂರು ನಡುವೆ ಸ್ಲೀಪರ್ ಕೋಚ್ ಬಸ್ಸಿನ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಸ್ಲೀಪರ್ ಕೋಚ್ ಬಸ್ಸು ಪುತ್ತೂರಿನಿಂದ ರಾತ್ರಿ 9:50ಕ್ಕೆ ಹೊರಟು ಉಪ್ಪಿನಂಗಡಿ ನೆಲ್ಯಾಡಿ-ಹಾಸನ ಮಾರ್ಗವಾಗಿ ಮರುದಿನ ಬೆಳಗ್ಗೆ 5:30 ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9:50ಕ್ಕೆ ಬಿಡುವ ಬಸ್ ಮರುದಿನ ಬೆಳಗ್ಗೆ 5:30ಕ್ಕೆ ಪುತ್ತೂರು ತಲುಪಲಿದೆ.

ಸೋಮವಾರ(ಏ.9) ದಂದು ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್ ನೂತನ ಬಸ್ಸಿಗೆ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕಿ ಮಲ್ಲಿಕಾ ಪ್ರಸಾದ್, ತಾಪಂ ಅಧ್ಯಕ್ಷ ಡಿ.ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಆನಂದ್, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್, ಮುಂತಾದವರು ಉಪಸ್ಥಿತರಿದ್ದರು.

ಪುತ್ತೂರು ಜನರ ಬಹುದಿನದ ಬೇಡಿಕೆಯಂತೆ ಸ್ಲೀಪರ್ ಕೋಚ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ,ಬೆಂಗಳೂರು ಮಂಗಳೂರು ರಸ್ತೆ ದುರಸ್ತಿಯ ನಡುವೆ ಸುಖನಿದ್ರೆ ಪ್ರಯಾಣ ಸಾಧ್ಯವೇ? ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+