ರೇವಣ್ಣ ಸೈಟು ಕೊಟ್ರು ಕವಿತಾ ಮೇಡಂ ಕೋಟಿ ಗಳಿಸಿದ್ರು

ಜೆಡಿಎಸ್-ಕಾಂಗ್ರೆಸ್ ಆಡಳಿತದಲ್ಲಿ ಧರಂಸಿಂಗ್ ನೇತೃತ್ವದ ಸರ್ಕಾರ 2006ರಲ್ಲಿ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ 10 ಎಕರೆ ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿರುವುದರ ವಿರುದ್ಧ ರಾಯಸಂದ್ರ ರವಿ ಎಂಬುವರು ಖಾಸಗಿ ದೂರು ಸಲ್ಲಿಸಿದ್ದಾರೆ.
ಈ ದೂರಿನ ಪ್ರಕಾರ ಭೂಮಿಯನ್ನು ಬಿಡಿಎ 1996ರಲ್ಲಿಯೇ ನೋಟಿಫೈ ಮಾಡಿದೆ. ಆದರೆ, ಧರಂಸಿಂಗ್ ಆದಳಿತಾವಧಿಯಲ್ಲಿ ಈ ಭೂಮಿಯನ್ನು ಅಂದಿನ ಲೋಕೋಪಯೋಗಿ ಸಚಿವ ರೇವಣ್ಣ ಅವರ ಆದೇಶದ ಮೇರೆಗೆ 10 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ.
ಡಿನೋಟಿಫೈ ಆಗಿ ಎರಡು ತಿಂಗಳಲ್ಲೇ ಈ ಭೂಮಿಯನ್ನು ಕವಿತಾ ಎಂಬ ಹೆಸರಿನಲ್ಲಿ ಖರೀದಿಸಲಾಗಿದ್ದು,ಇದರಲ್ಲಿ 2.11 ಎಕರೆ ಪ್ರದೇಶವನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ 3.5 ಕೋಟಿ ರು ಲಾಭದೊಂದಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ಮುಂಚಿನ ವಿಚಾರಣೆಯನ್ನು ಏ.16ರಂದು ನಡೆಸಲಾಗುವುದು ಎಂದು ನ್ಯಾ ಸುಧೀಂದ್ರರಾವ್ ಹೇಳಿದ್ದಾರೆ.












Click it and Unblock the Notifications