ಯಡಿಯೂರಪ್ಪ ಸದಾನಂದಗೌಡರ ಕಾಲೆಳೆದರೆ ಮುಗೀತು

get-ready-for-assembly-elections-kolar-varthur-prakash
ಕೋಲಾರ, ಏ.9: 'ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ನಾಯಕ ಸದಾನಂದಗೌಡರ ಕಾಲೆಳೆಯುವ ಕೆಲಸ ಮಾಡದಿದ್ದರೆ ಸರಕಾರ ತನ್ನ ಪೂರ್ಣಾವಧಿ ಪೂರೈಸುತ್ತದೆ. ಇಲ್ಲವಾದರೆ ಹೇಗೋ, ಏನೋ ಹೇಳೊಕ್ಕಾಗೊಲ್ಲ' ಎಂದು ಜವಳಿ ಸಚಿವ ಆರ್. ವರ್ತೂರು ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ: 'ರಾಜ್ಯ ರಾಜಕಾರಣ ಪರಿಸ್ಥಿತಿ ಸರಿಯಿಲ್ಲ. ಪರಿಸ್ಥಿತಿ ಹೀಗಿರುವಾಗ ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗಬಹುದು. ಆದ್ದರಿಂದ ಚುನಾವಣೆಗೆ ಸಜ್ಜಾಗಿ' ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವರ್ತೂರು ಪ್ರಕಾಶ್ ಅವರು ತಮ್ಮ ಬಣದ ಮುಖಂಡರು ಮತ್ತು ಕಾರ್ಯಕರ್ತರಿಗೆ ಭಾನುವಾರ ಕರೆ ನೀಡಿದ್ದಾರೆ. ತಾಲೂಕಿನ ಬೆಳಮಾರನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿಯ ಮಾನದಂಡದ ಮೇಲೆ ಕಾರ್ಯಕರ್ತರು ಮತ್ತು ಮುಖಂಡರು ಮತ ಯಾಚಿಸಬಹುದು. ಆದರೆ, ಒಗ್ಗಟ್ಟಿನಿಂದ ಈ ಕಾರ್ಯವನ್ನು ನೆರವೇರಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.

ತಮ್ಮ ಬಣದಲ್ಲಿ ಕಾಲೆಳೆಯುವ ನಾಯಕರ ಮಧ್ಯೆಯೂ ತನ್ನ ಉಳಿವಿಗೆ ದುಡಿಯುವ ಕೈಗಳು ಇವೆ. ಆ ಕೈಗಳಿಗೆ ಅಗತ್ಯ ಸ್ಥಾನಮಾನ ಕಲ್ಪಿಸಲು ಮುಂದಾಗಿರುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಪ್ರಕಟಿಸಿದರು.

ಬೆಗ್ಲಿ ಸೂರ್ಯಪ್ರಕಾಶ್, ವಕ್ಕಲೇರಿ ರಾಮು, ನೂತನವಾಗಿ ವರ್ತೂರು ಪ್ರಕಾಶ್ ಬಣಕ್ಕೆ ಸೇರ್ಪಡೆಯಾದ ಗ್ರಾ.ಪಂ. ಅಧ್ಯಕ್ಷ ಸಿ.ವಿ. ಮಂಜುನಾಥ್ ಮತ್ತು ಸದಸ್ಯ ಬಿ.ವಿ.ರಾಜಣ್ಣ , ತಾಪಂ ಉಪಾಧ್ಯಕ್ಷ ವಿ.ಮಂಜುನಾಥಗೌಡ, ಚಿಕ್ಕಮುನಿಯಪ್ಪ ಮತ್ತಿತರರು ಸಮಾರಂಭದಲ್ಲಿ ಮಾತನಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+