ಆರ್ ಟಿಒ ಭ್ರಷ್ಟರ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ

Lokayukta Raid
ಬೆಂಗಳೂರು, ಮಾ.30: ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳ ಭ್ರಷ್ಟರನ್ನು ಸದೆಬಡೆಯಲು ಟೊಂಕ ಕಟ್ಟಿರುವ ಲೋಕಾಯುಕ್ತ ಸಂಸ್ಥೆ ಶುಕ್ರವಾರ(ಮಾ.30) ಮಧ್ಯಾಹ್ನ ಭರ್ಜರಿ ಬೇಟೆಯಲ್ಲಿ ತೊಡಗಿದೆ.

ಕರ್ನಾಟಕದ ಆರ್ ಟಿಒಗಳಲ್ಲಿನ ಅವ್ಯವಹಾರ, ನಿರಂತರವಾಗಿ ಲಂಚಕ್ಕಾಗಿ ಬೇಡಿಕೆ, ಅಧಿಕಾರಿಗಳ ದರ್ಪದಿಂದ ಬೇಸತ್ತ ಸಾರ್ವಜನಿಕರು ನೀಡಿದ ದೂರನ್ನು ಪರಿಗಣಿಸಿ, ಲೋಕಾಯುಕ್ತ ಸಂಸ್ಥೆ ಏಕಕಾಲದಲ್ಲಿ ದಾಳಿ ನಡೆಸಿದೆ.

ಬೆಂಗಳೂರು, ಗದಗ, ಮೈಸೂರು, ಶಿವಮೊಗ್ಗ, ಸಾಗರ, ಚಿತ್ರದುರ್ಗ, ಕೋಲಾರ, ಯಾದಗಿರಿ, ಕಾರವಾರ, ತುಮಕೂರು, ಬೀದರ್, ಬಿಜಾಪುರ, ಮಂಗಳೂರು, ರಾಯಚೂರು, ಉಡುಪಿ, ಕೊಪ್ಪಳ, ಮಂಡ್ಯ ಆರ್ ಟಿಒ ಕಚೇರಿಗಳ ಮೇಲೆ ದಾಳಿ ನಡೆದಿದೆ.

ಬೆಂಗಳೂರಿನಲ್ಲೇ 11 ಆರ್ ಟಿಒಗಳ ಮೆಲೆ ದಾಳಿ ನಡೆದಿದೆ. ಕೋರಮಂಗಲ, ಇಂದಿರಾನಗರ, ಪರಪ್ಪನ ಅಗ್ರಹಾರ, ಜ್ಞಾನ ಭಾರತಿ, ಜಯನಗರ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮುಂತಾದೆಡೆ ಮಧ್ಯಾಹ್ನ 3 ಗಂಟೆಯಿಂದ ದಾಳಿ ನಡೆದಿದೆ.

ಲೋಕಾಯುಕ್ತ ಎಸ್ಪಿ ಶಿವಶಂಕರ್, ಡಿಜಿಪಿ ಸತ್ಯನಾರಾಯಣ 6 ಡಿಎಸ್ ಪಿ 21 ಇನ್ಸ್ ಪೆಕ್ಟರ್ ಗಳ ತಂಡ, ಭ್ರಷ್ಟರಿಗೆ ನಡುಕ ಹುಟ್ಟಿಸುತ್ತಿದೆ.

ಎಲ್ಲೆಡೆ ಸಾಕಷ್ಟು ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಇನ್ನೂ ಮುಂದುವರೆದಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+