ಬಿದರಿಗೆ ಭಾರಿ ಸೋಲು; ಐಜಿಪಿ ಹುದ್ದೆಗೆ ಸಂಚಕಾರ
ಬೆಂಗಳೂರು,ಮಾ.30:
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶಂಕರ ಮಹಾದೇವ ಬಿದರಿ ನೇಮಕವನ್ನು ಹೈಕೋರ್ಟ್ ವಿಭಣಾಗೀಯ ಪೀಠ ಸಹ ಶುಕ್ರವಾರ ಅನೂರ್ಜಿತಗೊಳಿಸಿತು. DG-IGP ಹುದ್ದೆಗೆ ಬಿದರಿ ನೇಮಕವನ್ನು ಅನೂರ್ಜಿತಗೊಳಿಸಿ, ಸಿಎಟಿ ಆದೇಶ ನೀಡಿತ್ತು. ಇದರ ವಿರುದ್ಧ ಬಿದರಿ (ರಾಜ್ಯ ಸರಕಾರವೂ) ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. id="toptextpromo">ಇದರಿಂದ
ಶಂಕರ ಬಿದರಿ ಮತ್ತು ರಾಜ್ಯ ಸರಕಾರ ಕಾನೂನು ಹೋರಾಟದಲ್ಲಿ ಭಾರಿ ಸೋಲುಂಡಿದೆ. ಅರ್ಹ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಆಯಕಟ್ಟಿನ ಸ್ಥಾನಕ್ಕೆ ನೇಮಿಸಿ ಎಂದೂ ನ್ಯಾಯಮೂರ್ತಿಗಳಾದ ದಿಲೀಪ್ ಡಿ. ಬೋಸ್ಲೆ ಮತ್ತು ಬಿ.ಎಸ್. ಇಂದ್ರಕಲಾ ಅವರ ನ್ಯಾಯಪೀಠ ತೀರ್ಪಿನಲ್ಲಿ ರಾಜ್ಯ ಸರಕಾರಕ್ಕೆ ಬುದ್ಧಿವಾದ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಬಿದರಿ
ನೇಮಕಾತಿ ರದ್ದುಗೊಳಿಸಿದ ಸಿಎಟಿ ಹೊಸ DG-IGP ನೇಮಕ ಮಾಡುವವರಗೆ ಹಂಗಾಮಿ DG-IGPಯಾಗಿ ಡಿಜಿಪಿ ಎ.ಆರ್. ಇನ್‌ಫ್ಯಾಂಟ್ ಅವರನ್ನು ನೇಮಿಸುವಂತೆ ಆದೇಶಿಸಿತ್ತು.











Click it and Unblock the Notifications