ಇನ್‌ಫ್ಯಾಂಟ್ ನೇಮಕ ಸುಗಮ; ಯಡ್ಡಿಗೆ ಮುಖಭಂಗ

ತೀರ್ಪು ಹೊರಬೀಳುತ್ತಿದ್ದಂತೆ ವಿಚಲಿತರಾದ ಸರಕಾರಿ ವಕೀಲರು ಕೋರ್ಟ್ ತೀರ್ಪಿಗೆ ತಡೆ ಕೋರಿದರು. 'ತಾವು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಆದ್ದರಿಂದ ಇಂದಿನ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕು' ಎಂದು ವಕೀಲರು ಕೋರಿದರು. ಆದರೆ ನ್ಯಾಯಪೀಠ 'ಅದೆಲ್ಲ ಆಗೋಲ್ಲ. ಮೊದಲು ಬೇರೆ DG-IGPಯನ್ನು ನೇಮಿಸಿ, ಆಮೇಲೆ ಮುಂದಿನ ಕಾನೂನು ಹೋರಾಟ ನಡೆಸಿ' ಎಂದು ತರಾಟೆಗೆ ತೆಗೆದುಕೊಂಡಿತು.
ಇದರಿಂದ ಶಂಕರ ಬಿದರಿ ಮತ್ತು ರಾಜ್ಯ ಸರಕಾರ ಮುಂದಿನ ಕಾನೂನು ಹೋರಾಟಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಕ್ಕೂ ಮುನ್ನ, ತತ್ ಕ್ಷಣದಿಂದ ಜಾರಿಗೆ ಬರುವಂತೆ ನೂತನ DG-IGP ರನ್ನು ನೇಮಕ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಅಬ್ದುಲ್ ರಹಮಾನ್ ಇನ್‌ಫ್ಯಾಂಟ್ ಅವರ ನೇಮಕಕ್ಕೆ ಹಾದಿ ಸುಗಮವಾಗಿದೆ ಎನ್ನಬಹುದು. ಇವರ ಸೇವಾವಧಿ ಇನ್ನು 1 ತಿಂಗಳಷ್ಟೇ ಬಾಕಿಯಿದೆ. ಆದರೆ 'ಒಂದೇ ದಿನದ ಮಟ್ಟಿಗೆ ಅಧಿಕಾರ ಸಿಕ್ಕಿದರೂ ಸಂತೋಷವೇ' ಎಂದು ಇನ್‌ಫ್ಯಾಂಟ್ ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದೆಡೆ, ಮೇಲಿಂದ ಮೇಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ಅದಾಗುತ್ತಿದ್ದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶಂಕರ ಮಹಾದೇವ ಬಿದರಿ ಅವರನ್ನು ಆತುರಾತುರವಾಗಿ ನೇಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮುಖಭಂಗವಾಗಿದೆ.












Click it and Unblock the Notifications