ಇನ್ಫೋಸಿಸ್ ಸಂದರ್ಶನಕ್ಕೆ ಬಂದಿದ್ದ ಟೆಕ್ಕಿ ಸಾವು

ಹೈದರಾಬಾದಿನ ಪ್ರದೀಪ್ ಗೆ ಇನ್ಫೋಸಿಸ್ ಕಂಪನಿಯಲ್ಲಿ ಬುಧವಾರ ಸಂದರ್ಶನ ನಿಗದಿಯಾಗಿತ್ತು. ಅದಕ್ಕಾಗಿ ನಿನ್ನೆ ರಾತ್ರಿಯೇ ಅವರು ಬೆಂಗಳೂರು ತಲುಪಿಕೊಂಡಿದ್ದರು. ಹೊಸೂರು ರಸ್ತೆಯ ಕೋನಪ್ಪನ ಅಗ್ರಹಾರದಲ್ಲಿರುವ ಚಂದನ ಹೋಟೆಲಿನಲ್ಲಿ ರೂಂ ಮಾಡಿದ್ದರು.
ಹೋಟೆಲ್ ಕೊಠಡಿಯಲ್ಲಿ ಲಗೇಜಿಟ್ಟು, ಊಟ ಮುಗಿಸಿ ರಾತ್ರಿ 8.15ರಲ್ಲಿ ವಾಕಿಂಗ್ ಗಾಗಿ ಪತ್ನಿಯ ಜತೆಗೂಡಿ ಹೊರಗೆ ಬಂದಿದ್ದರು. ಹೋಟೆಲ್ ಮುಂಭಾಗದ ಸರ್ವಿಸ್ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಟವೇರಾ ಕಾರು ಡಿಕ್ಕಿ ಹೊಡೆಯಿತು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರದೀಪ್ ಅವರನ್ನು ತಕ್ಷಣ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಪ್ರದೀಪ್ ಪತ್ನಿಗೂ ಗಾಯಗಳಾಗಿದ್ದು, ತೀವ್ರ ಆಘಾತಕ್ಕೊಳಗಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications