ತೊಟ್ಲೂ ತೂಗಿ ಯಡ್ಡಿಯ ಚಿವುಟುತ್ತಿರುವ ಸದಾನಂದ

ಏನ್ ಹಾಗೆಂದರೆ, ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿಲ್ಲವಾ!? ಎಂದು ಆಶ್ಚರ್ಯ ಚಕಿತರಾಗಬೇಡಿ. ಆ ಹುದ್ದೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಅವರು ಇಂತಹ ಸಾಹಸಕ್ಕೆ ಇಳಿದಿದ್ದಾರೆ.
ರಾಮ(ಭಟ್ಟ) ಬಾಣ: ಪಟ್ಟಕ್ಕಾಗಿ ಯಡಿಯೂರಪ್ಪನವರ ಎಗರಾಟವನ್ನು ಒಂದು ಹಂತದವರೆಗೂ ಹಿಡಿದಿಟ್ಟಿರುವ ಸದಾನಂದರು ಮುಂದಿನ ತೊಗಲುಗೊಂಬೆ ಆಟಕ್ಕಾಗಿ ಸೂತ್ರವನ್ನು ಬೇರೆಯವರ ಕೈಗೆ ಒಪ್ಪಿಸಿ, ಆಟ enjoy ಮಾಡುತ್ತಿದ್ದಾರೆ. ಇತ್ತ ಯಡಿಯೂರಪ್ಪನವರನ್ನು ಸಮಾಧಾನಪಡಿಸುವಂತೆ ನಟಿಸುತ್ತಾ, ಅತ್ತ ತಮ್ಮ ರಾಜಕೀಯ ಗುರು-ಗೈಡ್ ಉರಿಮಜಲು ರಾಮಭಟ್ಟರ ಮೂಲಕ ದಿಲ್ಲಿ ವೇದಿಕೆಯಲ್ಲಿ ಯಕ್ಷಗಾನ ಆಡಿಸುತ್ತಿದ್ದಾರೆ.
ಮೊನ್ನೆಯಷ್ಟೇ ಕಾಂಗ್ರೆಸ್ ಶಾಸಕ ನೆ.ಲ. ನರೇಂದ್ರ ಬಾಬು ಬೆಳಕಿಗೆ ತಂದಿದ್ದ ಯಡಿಯೂರಪ್ಪ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ಸದಾನಂದಗೌಡರು ಕಾನೂನುಬದ್ಧವಾಗಿ ಸರಿತಿದ್ದಿ, ಕೈತೊಳೆದುಕೊಂಡರು. ಯಾವ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೋರ್ಟು ಛೀಮಾರಿ ಹಾಕಿತ್ತೋ ಅದನ್ನು ತಣ್ಣಗಾಗಿಸಿದರು. ಸದ್ಯ ಮತ್ತೊಂದು ಕೋರ್ಟ್ ಕಂಟಕ ತಪ್ಪಿತಲ್ಲ ಅಂತ ಯಡಿಯೂರಪ್ನೋರೂ ಸಂತುಷ್ಟಗೊಂಡರು.
ಆದರೆ ಪಟ್ಟಕ್ಕಾಗಿ ಗೌಡರು ಆಡುತ್ತಿರುವ ಪಗಡೆಯಾಟವೇ ಬೇರೆ. ಅವರುರುಳಿಸುತ್ತಿರುವ ದಾಳವೇ ಬೇರೆ. ದಿಲ್ಲಿಯಲ್ಲಿ ವರಿಷ್ಠರ ಮುಂದೆ ಹಿರಿಯ ತಲೆಗಳನ್ನು ಪೆರೇಡ್ ಮಾಡಿಸಿ, ತಾವು ಪರದೆ ಕೆ ಪೀಛೆ ಉಳಿದಿದ್ದಾರೆ. 'ಹೇಗಾದರೂ ಮಾಡಿ ಈ ಬಾರಿ ಯಡಿಯೂರಪ್ಪನವರನ್ನು ಕಟ್ಟಿ ಹಾಕಿ ಗುರುಗಳೇ' ಎಂದು ಉರಿಮಜಲು ರಾಮಭಟ್ಟರಿಗೆ ವೀಳ್ಯ ನೀಡಿದ್ದಾರೆ. ಅದರಂತೆ ಸದಾನಂದರ ಸಿಎಂ ಪಟ್ಟವನ್ನು Team Shivappa ದೆಹಲಿಯಲ್ಲಿ ಭದ್ರಪಡಿಸುತ್ತಿದೆ. ತನ್ಮೂಲಕ ಯಡಿಯೂರಪ್ಪನವರ ಪ್ರಯತ್ನಗಳಿಗೆ ಅಂತಿಮ ಮೊಳೆ ಹೊಡೆಯುತ್ತಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications