ಬಜೆಟ್ ಸುಧಾರಣೆಯನ್ನು ಕಡೆಗಾಣಿಸಿದೆಯೇ? ಚರ್ಚೆ

Center for Educational and Social Studies (CESS) ಭಾಗವಾಗಿರುವ ಜಿಜ್ಞಾಸ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ Institute for Social and Economic Change(ISEC)ನ ನಿರ್ದೇಶಕ ದೇಶಪಾಂಡೆ ಅವರು ಉಪನ್ಯಾಸ ನೀಡಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿವಿ ಕೃಷ್ಣಭಟ್ಟ ಅವರು ವಹಿಸಿಕೊಳ್ಳಲಿದ್ದಾರೆ.
ದಿನಾಂಕ: ಮಾ.31, ಶನಿವಾರ
ಸಮಯ: 4 ಗಂಟೆ
ಸ್ಥಳ: ಮಿಥಿಕ್ ಸೊಸೈಟಿ, ಯವನಿಕಾ ಆಡಿಟೋರಿಯಂ ಎದುರು ನೃಪತುಂಗ ರಸ್ತೆ, ಬೆಂಗಳೂರು
ಜಿಜ್ಞಾಸ ಹಾಗೂ CESS ಬಗ್ಗೆ : ಜಿಜ್ಞಾಸ ಎಂದರೆ ಸಂಸ್ಕೃತದಲ್ಲಿ ವಿಚಾರಣೆ, ಚರ್ಚೆ ಎಂದಾಗುತ್ತದೆ. CESS ಅಡಿಯಲ್ಲಿರುವ ಜಿಜ್ಞಾಸ ಮೂಲಕ ಜ್ಞಾನಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಮೂಲ ಉದ್ದೇಶ.
ಭಾರತ ಬರೀ ದೇಶವಲ್ಲ, ಸಮಸ್ತ ನಾಗರೀಕ ಸಮಾಜ. ನಾಗರೀಕ ಸಮಾಜದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಹಳೆ ಕಂದಾಚಾರಗಳು ಹೊಸ ನಿಯಮಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶ.
ನಮ್ಮ ನಾಗರೀಕತೆ ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ. ನಮ್ಮ ಧರ್ಮ ಹಾಗೂ ಕಾನೂನು ವಿಶ್ವಕ್ಕೆ ಮಾದರಿಯಾಗಿದೆ. ವಿಜ್ಞಾನದ ತಳಹದಿಯ ಮೇಲೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳತ್ತ CESS ಗಮನ ಹರಿಸುತ್ತದೆ.












Click it and Unblock the Notifications