ಬೆಂಗಳೂರಿನ ಬ್ರೈನ್ ಡೆಡ್ ಟೆಕ್ಕಿಯ ಅಂಗಾಂಗ ದಾನ
ಬೆಂಗಳೂರು,
ಮಾ. 26 : ಮಿದುಳು ನಿಷ್ಕ್ರಿಯವಾಗಿರುವ 29 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅವರ ಅಂಗಾಂಗಗಳು ಐವರಿಗೆ ಜೀವನವನ್ನು ನೀಡಲಿವೆ. ಟೆಕ್ಕಿಯ ಕುಟುಂಬದವರು ಈ ಕ್ಲಿಷ್ಟಕರ ನಿರ್ಧಾರವನ್ನು ತೆಗೆದುಕೊಂಡು ಮಾನವೀಯತೆ ಮೆರೆದಿದ್ದಾರೆ. id="toptextpromo">ಮಾರ್ಚ್
18ರಂದು ಹೈದರಾಬಾದಿನಿಂದ ಬೆಂಗಳೂರಿಗೆ ವಾಪಸ್ ಬರುವಾಗ ಶರತ್ ಪಿಆರ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಶರತ್ ಅವರ ಹೆಂಡತಿ ಪವಾಡಸದೃಶ ಪಾರಾಗಿದ್ದರು. ಆದರೆ, ಶರತ್ ಅವರು ಒಂದು ವಾರಗಳ ಕಾಲ ಕೋಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದರು. ಅವರನ್ನು ಭಾನುವಾರ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಆಸ್ಪತ್ರೆಯ
ವೈದ್ಯರು ಮತ್ತು ಕರ್ನಾಟಕದ ಜೋನಲ್ ಕೋಆರ್ಡಿನೇಷನ್ ಕಮಿಟಿಯಿಂದ ಕೌನ್ಸೆಲಿಂಗ್ ನಡೆಸಿದ ನಂತರ ಶರತ್ ಕುಟುಂಬದವರು ಅಂಗಾಂಗ ದಾನ ಮಾಡುವ ಮಹತ್ತರ ನಿರ್ಧಾರಕ್ಕೆ ಬಂದರು. ಶರತ್ ಅವರ ಯಕೃತ್ತು, ಮೂತ್ರಪಿಂಡ, ಹೃದಯದ ಕವಾಟ ಮತ್ತಿತರ ಅಂಗಗಳು ಬೇರೆ ರೋಗಿಗೆ ಜೀವದಾನ ಮಾಡಲಿವೆ.











Click it and Unblock the Notifications